ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ನಾದಿನಿ ಜೊತೆ ಸೇರಿ ಅಣ್ಣನೇ ತಮ್ಮನನ್ನು ಕೊಂದ ಘಟನೆ ಹಾಸನದ ಮುಂಕುಂದೂರು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಆನಂದ್ (36) ಕೊಲೆಯಾದ ವ್ಯಕ್ತಿ. ಆನಂದ್ ದೊಡ್ಡಪ್ಪನ ಮಗ ಸೋಮಶೇಖರ್ ಹಾಗೂ ಆನಂದ್ ಪನಿ ಕೊಲೆಗೈದ ಆರೋಪಿಗಳು. ಆನಂದ್ ನನ್ನು ಕೊಲೆ ಮಾಡಿ ತಮಗೇನು ಗೊತ್ತಿಲ್ಲದಂತೆ ನಾಟಕವಾಡಿದ್ದರು. ಇಬ್ಬರು ಸೇರಿಕೊಂಡು ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬಿಂಬಿಸಲು ಹೊರಟಿದ್ದರು.
ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಮೇಎಗೆ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಆನಂದ್ ಪಕ್ಕದ ಮನೆಯಲ್ಲಿಯೇ ಸೋಮಶೇಖರ್ ಕುಟುಂಬ ವಾಸವಾಗಿತ್ತು. ಮೂರು ವರ್ಷಗಳ ಹಿಂದೆ ಸೋಮಶೇಖರ್ ಪತ್ನಿ ಅನಾರೋಗ್ಯದಿಂದಸಾವನ್ನಪ್ಪಿದ್ದಳು. ಪತ್ನಿ ಸಾವಿನ ಬಳಿಕ ಸೋಮಶೇಖರ್ ತಮ್ಮನ ಮನೆಗೆ ತಿಂಡಿ, ಊಟಕ್ಕೆಂದು ಬರುತ್ತಿದ್ದ. ಹೀಗೆ ಬಂದು ನಾದಿನಿ ಜೊತೆಯೇ ಅಕ್ರಮ ಸಂಬಂಧ ಬೆಳೆಸಿದ್ದನಂತೆ.
ವಿಷಯ ಆನಂದನಿಗೆ ಗೊತ್ತಾಗಿ ಆಪ್ತರ ಜೊತೆ ನೊಂದುಕೊಂಡಿದ್ದ. ಮರ್ಯಾದೆ ಪ್ರಶ್ನೆ ಎಂದು ಪತ್ನಿಗೆ ಬುದ್ಧಿಹೇಳಿ, ತಿದ್ದಿಕೊಳ್ಳುವಂತೆ ಹೇಳಿದ್ದನಂತೆ. ಆದರೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಆನಂದನನ್ನೇ ಮುಗಿಸಲು ಪ್ಲಾನ್ ಮಾಡಿದ್ದರು. ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳಲೆಂದು ಮನೆಯಿಂದ ಹೋದವನು ವಾಪಾಸ್ ಆಗಿರಲಿಲ್ಲ. ದೊಡ್ಡಕೆಂಚೇವು ಗ್ರಾಮದ ಕೆರೆಯಲ್ಲಿ ಆನಂದ್ ಶವ ಪತ್ತೆಯಾಗಿತ್ತು. ಮೃತದೇಹ ಕಂಡ ಗ್ರಾಮಸ್ಥರು ಕೊಲೆ ಅನುಮಾನ ವ್ಯಕ್ತಪಡಿಸಿದ್ದರು. ಆನಂದನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪೊಲೀಸರುಗೆ ಮಾಹಿತಿ ನೀಡಿದ್ದರು. ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ