ಪ್ರಗತಿವಾಹಿನಿ ಸುದ್ದಿ: ಅಣ್ಣನೇ ತಮ್ಮನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗದ ಲಂಬಾಣಿ ತಾಂಡಾದಲ್ಲಿ ನಡೆದಿದೆ.
ಗಿರೀಶ್ ನಾಯ್ಕ್ (30) ಕೊಲೆಯಾದ ದೌರ್ದೈವಿ. ಲೋಕೇಶ್ ನಾಯ್ಕ್ ತಮ್ಮನನ್ನೇ ಕೊಂದ ಅಣ್ಣ. ಅಣ್ಣ-ತಮ್ಮನ ನಡುವೆ ಗಲಾಟೆಯಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು, ಇಂದು ಬೆಳಿಗ್ಗೆ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ.
ತುಂಗಾನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ