Karnataka News

*ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಸ್ಪರ್ಶಿಸದ ಸೂರ್ಯ ಕಿರಣಗಳು: ಭಕ್ತರಿಗೆ ಭಾರಿ ನಿರಾಸೆ*

ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಾಂತಿ ಹಬ್ಬದಂದು ಬೆಂಗಳೂರಿನ ಪುರಾಣ ಪ್ರಸಿದ್ದ ಗವಿಗಂಗಾಧರ ದೇವಸ್ಥಾನದಲ್ಲಿ ನಡೆಯುವ ಐತಿಹಾಸಿಕ ಕ್ಷಣಗಳು ಈಬಾರಿ ನಡೆದಿಲ್ಲ. ಪ್ರತಿಬಾರಿ ಸಂಕ್ರಮಣದಂತೆ ಈಬಾರಿ ಸೂರ್ಯಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿಲ್ಲ. ಇದರಿಂದಾಗಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ನಿರಾಶರಾಗಿದ್ದಾರೆ.

ಬೆಂಗಳೂರಿನ ಗವೀಪುರಂನಲ್ಲಿರುವ ಪುರಾಣಪ್ರಸಿದ್ಧ ದೇವಸ್ಥಾನ ಗವಿಗಂಗಾದ್ಧರೇಶ್ವರ ದೇವಸ್ಥಾನದಲ್ಲಿ ಸಕ್ರಮಣದಂದು ಸಂಜೆ ಸೂರ್ಯ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ಮೂಲಕ ಸೂರ್ಯದೇವ ಶಿವದೇವರಿಗೆ ನಮಸ್ಕರಿಸಿ ತನ್ನ ಪಥ ಬದಲಾಯಿಸುತ್ತಾನೆ ಎಂಬ ನಂಬಿಕೆಯಿದೆ. ಈ ಪುಣ್ಯಮಯ ಕ್ಷಣಗಳನ್ನು ನೋಡಲೆಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಇಂದು ಕೂಡ ಈ ಕೌತುಕ ಕ್ಷಣಕ್ಕೆ ಇಡೀ ರಾಜ್ಯವೇ ಕಾದುಕುಳಿತಿತ್ತು. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸೂರ್ಯದೇವ ಗವಿಗಂಗಾಧರನಿಗೆ ನಮಿಸುವ ಮೂಲಕ ಪಥ ಬದಲಿಸಬೇಕುತ್ತು. ಸಂಜೆ 5:14ರಿಂದ 5:17ರ ಸಮಯದಲ್ಲಿ ಸೂರ್ಯನ ಕಿರಣಗಳು ದೇವಸ್ಥಾನದ ನಂದಿ ವಿಗ್ರಹದ ಮೂಲಕ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಪಾರ್ವತಿ ದೇವಿಗೆ ನಮಸ್ಕರಿಸಿ ಬಳಿಕ ಶಿವಲಿಂಗವನ್ನು ಸ್ಪರ್ಶಿಸಬೇಕಿತ್ತು. ಆದರೆ ಇಂದು ಈ ವಿಸ್ಮಯ ನಡೆದಿಲ್ಲ. ಮೋಡದಲ್ಲಿ ಮರೆಯಾಗಿದ್ದ ಸೋರ್ಯಕಿರಣಗಳು ದೇವಾಲಯದತ್ತ ಸುಳಿದಿಲ್ಲ.

ಬೆಂಗಳೂರಿನಾದ್ಯಂತ ಮೋಡಕವಿದ ವಾತಾವರಣ, ಮಂಜು ಮುಸುಕಿರುವ ಹಿನ್ನೆಲೆಯಲ್ಲಿ ಸೋರ್ಯ ಕಿರಣಗಳು ಗೋಚರವಾಗಿಲ್ಲ. ಹೀಗಾಗಿ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಭಕ್ತರು, ಸಾರ್ವಜನಿಕರು ನಿರಾಶರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button