ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ವಿಲ್ಲುಪುರಂ ರೈಲು ನಿಲ್ದಾಣದ ಬಳಿ ಸುಮಾರು 500 ಪ್ರಯಾಣಿಕರಿದ್ದ ಪುದುಚೇರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಕನಿಷ್ಠ ಐದು ಬೋಗಿಗಳು ಹಳಿತಪ್ಪಿವೆ.
ಲೋಕೋ ಪೈಲಟ್ ಮುನ್ನೆಚ್ಚರಿಕೆಯಿಂದ ದೊಡ್ಡ ದುರಂತ ಸ್ವಲ್ಪದರಲ್ಲೆ ತಪ್ಪಿದೆ. ಲೋಕೋ-ಪೈಲಟ್ ದೊಡ್ಡ ಶಬ್ದ ಕೇಳಿದ ನಂತರ ರೈಲು ತಕ್ಷಣವೇ ನಿಂತಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ. ಸುಮಾರು 500 ಪ್ರಯಾಣಿಕರು ಈ ರೈಲಿನಲ್ಲಿದ್ದರು. ವಿಲ್ಲುಪುರಂ-ಪುದುಚೇರಿ ರೈಲು ತೆರಳುತಿತ್ತು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ