ತಿರುಪತಿ ತಿಮ್ಮಪ್ಪನ ಚಿನ್ನ ಕದ್ದ ಆರೋಪದಲ್ಲಿ ಟಿಟಿಡಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿ: ತಿರುಪತಿ ತಿಮ್ಮಪ್ಪನಿಗೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ ಚಿನ್ನವನ್ನು ಕದ್ದ ಪ್ರಕರಣ ಸಂಬಂಧ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಟಿಟಿಡಿ ನೌಕರನನ್ನು ಬಂಧಿಸಲಾಗಿದೆ.
ಶ್ರೀಹರಿ ಪರಕಾಮಣಿಯ ಸಂಗ್ರಹಾಲಯದಿಂದ ಚಿನ್ನವನ್ನು ಕದಿಯುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ವೀರಿಶೆಟ್ಟಿ ಪೆಂಚಲಯ್ಯ ಬಂಧಿತ ನೌಕರ. ಕಳೆದ ಎರಡು ವರ್ಷಗಳಿಂದ ಕಾಣಿಕೆ ಹುಂಡಿ ಹಣ ಎಣಿಸುವ ಮತ್ತು ವಿಂಗಡಿಸುವ ಕೆಲಸದಲ್ಲಿ ತೊಡಗಿದ್ದ ಈತ ಪರಕಾಮಣಿಯ ಚಿನ್ನದ ಸಂಗ್ರಹಣಾ ಕೊಠಡಿಯಲ್ಲಿ ಸಂಗ್ರಹಿಸಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಎನ್ನಲಾಗಿದೆ.
ಜ.11ರಂದು ಮಧ್ಯಾಹ್ನ ವೀರಿಶೆಟ್ಟಿ ಶೇಖರಣಾ ಕೊಠಡಿಯಿಂದ 100 ಗ್ರಾಂ ಚಿನ್ನದ ಬಿಸ್ಕೆಟ್ ಗಳನ್ನು ಕದುಇಯುವಾಗ ಸಿಕ್ಕಿಬಿದ್ದಿದ್ದಾನೆ. ಕದ್ದ ಚಿನ್ನವನ್ನು ಪರಕಮಣಿ ಕಟ್ಟಡದಲ್ಲಿ ಟ್ರಾಲಿ ಮೂಲಕ ಸಾಗಿಸುತ್ತಿದ್ದಾಗ ವಿಜಿಲೆನ್ಸ್ ಸಿಬ್ಬಂದಿ, ಅಡಗಿಸಿಟ್ಟುಕೊಂಡಿದ್ದ ಚಿನ್ನ ಪತ್ತೆ ಮಾಡಿ ಸಿಸಿಟಿವಿ ಮೂಲಕ ಕಳ್ಳತನ ದೃಢಪಡಿಸಿ ತಿರುಮಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ