Belagavi NewsBelgaum News

ಬೆಳಗಾವಿಯಲ್ಲಿ ಜಾನಪದ ಕಲಾ ಉತ್ಸವ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಹಾಗೂ ಶ್ರೀ. ಶಿವಾನಂದ ಭಾರತಿ ಸ್ವಾಮಿ ಜಾನಪದ ಕಲಾ ಯುವ ಸಂಘ, ಜೋಕಾನಟ್ಟಿ ಜಿಲ್ಲಾ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾ ಉತ್ಸವ ಕಾರ್ಯಕ್ರಮ 2024-25 ದಿನಾಂಕ ಜನವರಿ 10, 11, 12 ರಂದು ಗೋಕಾಕ/ಮೂಡಲಗಿ, ತಾಲೂಕಿನ ಜೋಕಾನಟ್ಟಿ ಗ್ರಾಮದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಜನಪದ ಕಲೆ ಎಂಬುದು ಸರ್ವಕಾಲಕ್ಕೂ ಶ್ರೇಷ್ಠ ಎಂದು ತಿಳಿಸಿದರು.

ಕೆ.ಡಿ.ಪಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಡಾ. ರಮೇಶ ಯ ಹರಿಜನ ಮಾತನಾಡಿ ಜಾನಪದ ಕಲೆ ಉಳಿಸಿ ಬೆಳೆಸಬೇಕೆಂದರು. ಶ್ರೀ ಬಿಳಿಯಾನಂದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು ಯಲ್ಲಪ್ಪ ನಾಯ್ಕರ ಹಾಗೂ ರುದ್ರಪ್ಪ ಮಾದರ, ಯಮನವ್ವ ಮಾದರ, ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮದಲ್ಲಿ ಶಿವಾನಂದ ಮಾದರ, ಪ್ರಕಾಶ ಪಾ ಹರಿಜನ, ಸಂತೋಷ ಅವಜಪ್ಪಗೋಳ, ಗುಂಡುರಾವ ಗುಜನಟ್ಟಿ, ಸಿದ್ದಲಿಂಗಪ್ಪ ಕಂಬಳಿ, ಕುಬೇಂದ್ರ ತೆಗ್ಗಿ, ಶೆಟ್ಟೆಪ್ಪ ಮಾದರ, ಶಿವಗೊಂಡ ಪಾಟೀಲ, ಭೀಮಪ್ಪ ಬೊದನಾಪೂರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಾನಪದ ಗೀತೆ, ಜಾನಪದ ನೃತ್ಯ, ಕೋಲಾಟ, ಭಜನೆ, ಡೋಳ್ಳಿನ ಪದಗಳು, ಲಾವಣಿ ಪದಗಳು, ಸೋಬಾಣ ಪದಗಳು, ಸಂಪ್ರದಾಯ ಪದಗಳು, ನಾಟಕಗಳು, ಸಣ್ಣಾಟಗಳು ಜರುಗಿದವು. ಬಸವರಾಜ ಹರಿಜನ ಕಾರ್ಯಕ್ರಮ ನಿರೂಪಿಸಿದರು, ಭಾರತಿ ಜೋಕಾನಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button