*ಈ ರಸ್ತೆ ಹತ್ತು ದಿನ ಬಂದ್: ಪರ್ಯಾಯ ಮಾರ್ಗ ಬಳಸಲು ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಖಾನಾಪೂರ- ಮಂತುರ್ಗಾ ರೈಲ್ವೆ ಕ್ರಾಸಿಂಗ್ ಎಲ್.ಸಿ ಗೇಟ್ ನಂ 356 ಅಂಡರ್‌ಪಾಸ್ ನಿರ್ಮಾಣ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಜನವರಿ 12 ರಿಂದ ಮಾರ್ಚ್ 22, 2025 ವರೆಗೆ ರಸ್ತೆ ಮಾರ್ಗ ಬಂದ್ ಮಾಡಲಾಗಿರುತ್ತದೆ ಎಂದು ಬೆಳಗಾವಿ ನೈಋತ್ಯ ರೈಲ್ವೆ ಕಿರಿಯ ಅಭಿಯಂತರರಾದ ರಾಕೇಶ್ ಕುಮಾರ್ ಓಜಾ ಅವರು ತಿಳಿಸಿದ್ದಾರೆ.
ವಾಹನಗಳ ಸಂಚಾರಕ್ಕೆ ಸದರಿ ಮಾರ್ಗದ ಬದಲಾಗಿ ರುಮೇವಾಡಿ ಕ್ರಾಸ್ ಹತ್ತಿರ ಅಸೋಗಾ ಗ್ರಾಮ ಮುಖಾಂತರ ಪರ್ಯಾಯ ಮಾರ್ಗ ಕಲ್ಪಿಸಲಾಗಿರುತ್ತದೆ.
ಈ ಕುರಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿ ಗೇಟ್ ಬಂದ್ ಮಾಡಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿ ಅನುಮತಿ ನೀಡಿರುತ್ತಾರೆ.
ಅದರಂತೆ ಸ್ಥಳೀಯ ಜನರಿಗೆ ಮತ್ತು ಖಾನಾಪೂರದಿಂದ ಹೆಮ್ಮಡಗಾ ಸಂಚರಿಸುವ ವಾಹನಗಳಿಗೆ ಅಸೋಗಾ ರಸ್ತೆಯ ಮೂಲಕ ಪರ್ಯಾಯ ಮಾರ್ಗ ಲಭ್ಯವಿವೆ ಎಂದು ಬೆಳಗಾವಿ ನೈಋತ್ಯ ರೈಲ್ವೆ ಕಿರಿಯ ಅಭಿಯಂತರರಾದ ರಾಕೇಶ್ ಕುಮಾರ್ ಓಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ