ಪ್ರಗತಿವಾಹಿನಿ ಸುದ್ದಿ : ಬೈಕ್ ಮತ್ತು ಗೂಡ್ಸ್ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಶಿರವಾಳ ಗ್ರಾಮದ ಬೈಕ್ ಸವಾರ ಶಿವಕುಮಾರ್ (19), ಗೂಡ್ಸ್ ಆಟೋದಲ್ಲಿದ್ದ ಅಳ್ಳಗಿ ಗ್ರಾಮದ ಹಸನಸಾಬ್ (70) ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದ ಬೈಕ್ ಸವಾರನ ಯಡವಟ್ಟಿನಿಂದ ಗೂಡ್ಸ್ ಆಟೋಗೆ ಬೈಕ್ ಡಿಕ್ಕಿಯಾದ ರಭಸಕ್ಕೆ ಆಟೋ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಆಟೋದಲ್ಲಿದ್ದ ತೊಗರಿ ಚೀಲ ಮೇಲೆ ಬಿದ್ದ ಪರಿಣಾಮ ಹಸನ್ ಸಾಬ್ ಅಸುನೀಗಿದ್ದಾರೆ. ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ