ಪ್ರಗತಿವಾಹಿನಿ ಸುದ್ದಿ: ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ, ಅಭಿಮಾನಿಗಳು, ಬೆಂಬಲಿಗರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಸಂಗಮೇಶ್ವರ, ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ:
ಕುಕಡೊಳ್ಳಿ ಸಮೀಪದ ಬೆಂಡಿಗೇರಿ ಗ್ರಾಮದ ಶ್ರೀ ಸಂಗಮೇಶ್ವರ ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆಯನ್ನು ಇಟ್ಟುಕೊಳ್ಳಲಾಗಿತ್ತು. ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಇವರು ಶೀಘ್ರ ಗುಣಮುಖರಾಗಲೆಂದು ಎಲ್ಲರೂ ಸೇರಿಕೊಂಡು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕ್ರಯ್ಯ ಸುರಗಿಮಠ, ಮೃತ್ತುಂಜಯ ಹಿರೇಮಠ, ರವಿಂದ್ರ ಮೆಳೇದ, ಮುರಸಿದ್ದ ಬಾಳೇಕುಂದ್ರಿ , ಬ್ರಮ್ಮಾ ದೊಡಮನಿ, ಸಿದ್ದಣ್ಣ ಹಾವನ್ನವರ, ಶಿವು ಚಂಡು, ಬಸ್ಸಮ್ಮ ಚವ್ಹಾನ, ಬಾಳಪ್ಪ ಮಾಡಲಗಿ, ಶಂಕರ ಮೆಳೇದ, ಸಂತೋಷ ಉಪ್ಪಿನ, ಸಂತೋಷ ಕಾದ್ರೊಳ್ಳಿ ಸೇರಿದಂತೆ ಬೆಂಡಿಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಕಡೊಳ್ಳಿಯ ಶ್ರೀ ಕಲ್ಮೇಶ್ವನಿಗೆ ವಿಶೇಷ ಪೂಜೆ:
ಕುಕಡೊಳ್ಳಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜನಪ್ರಿಯ MLC ಚನ್ನರಾಜ ಹಟ್ಟಿಹೊಳಿ ಅವರು ಮೊನ್ನೆ ಬೆಂಗಳೂರಿನಿಂದ ಬೆಳಗಾವಿಗೆ ಬರುವ ಸಂದರ್ಭದಲ್ಲಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಸಮೀಪದಲ್ಲಿ ಕಾರು ಅಪಘಾತವಾಗಿ ಗಾಯಗೊಂಡಿದ್ದರು. ಆದಷ್ಟು ಬೇಗನೆ ಅವರೆಲ್ಲರೂ ಗುಣಮುಖರಾಗಿ ಬಂದು ಕ್ಷೇತ್ರದ ಹಾಗೂ ರಾಜ್ಯದ ಜನರ ಸೇವೆಯನ್ನು ಮಾಡುವಂತಾಗಲೆಂದು ಪ್ರಾರ್ಥಿಸಿ
ಕುಕಡೊಳ್ಳಿ ಗ್ರಾಮದ ಆರಾಧ್ಯ ದೇವ ಶ್ರೀ ಕಲ್ಮೇಶ್ವರನಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಚನ್ನಬಸ್ಸಯ್ಯಾ ಹಿರೇಮಠ, ಬಾಳಯ್ಯಾ ಪೂಜೇರ, ಶಿವಪ್ಪ ಕುಂಬಾರ, ಮಂಜುನಾಥ ಹುಬ್ಬಳ್ಳಿ, ನಾಗೇಶ ಮರಕಟ್ಟಿ, ಶಿವು ಕಿಲ್ಲೇದಾರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಕರ ಸಂಕ್ರಾಂತಿಯ ದಿವಸದಂದು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಲಕ್ಷ್ಮಿ ಹೆಬ್ಬಾಳಕರ್ ಹಾಗೂ MLC ಚನ್ನರಾಜ ಹಟ್ಟಿಹೊಳಿ ಅವರ ಕಾರು ಬೆಳಿಗ್ಗೆ 5.30ಗಂಟೆಗೆ ನಾಯಿ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಗಿಡಕ್ಕೆ ಡಿಕ್ಕಿ ಹೊಡೆದಿದ್ದು ದೇವರ ಹಾಗೂ ಕರ್ನಾಟಕ ಜನತೆಯ ಆಶೀರ್ವಾದದಿಂದ ಪ್ರಾಣಪಾಯ ಆಗಿಲ್ಲ. ಸಣ್ಣ ಪುಟ್ಟ ಗಾಯ ಆಗಿದ್ದು ಶ್ರೀ ಉಳವಿ ಚನ್ನ ಬಸವಣ್ಣ ಸನ್ನಿದಾನದಲ್ಲಿ ಇಬ್ಬರು ಬೇಗ ಗುಣಮುಖರಾಗಿ ಮತ್ತೆ ಜನರ ಸೇವೆ ಮಾಡಲಿ ರುದ್ರಾಭಿಷೇಕ ಹಾಗೂ ಕಂಟಕ ನಿವಾರಣೆ ಪೂಜೆ ಮಾಡಲಾಯಿತು.
ಅಡಿವೆಪ್ಪ ತೋಟಗಿ ಹಾಗೂ ಕುಟುಂಬಸ್ಥರಿಂದ ಉಳವಿಯ ಶ್ರೀ ಚನ್ನಬಸವೇಶ್ವರನ ಸನ್ನಿದಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಬಿಜಗರ್ಣಿ ದೇವಸ್ಥಾನದಲ್ಲೂ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ