Belagavi NewsBelgaum NewsKannada NewsKarnataka NewsLatestNationalPolitics

*ಬೆಳಗಾವಿಯಲ್ಲಿ 15 ದಿನಗಳ ಹಿಂದೆ ಜನಿಸಿದ್ದ ಮಗು ಸಾವು: ತಂದೆ ಮೇಲೆ ಅನುಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ಮಗುವಿನ ಸಾವಿಗೆ ತಂದೆಯೇ ಕಾರಣ ಎಂದು ಆರೋಪಿಸಲಾಗಿದೆ.

ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹೆಣ್ಣು ಮಗು ಮಂಗಳವಾರ ರಾತ್ರಿ ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. 

Home add -Advt

ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ. 

ಬಿಮ್ಸ್ ಆಸ್ಪತ್ರೆಗೆ ಡಿಸಿಪಿ ನಾರಾಯಣ್ ಬರಮನಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.

Related Articles

Back to top button