EducationKarnataka NewsLatest

*ಶಾಲಾ ಆಡಳಿತ ಮಂಡಳಿ ಎಡವಟ್ಟು: ಪರೀಕ್ಷೆ ಬರೆಯಲಾಗದೇ ವಂಚಿತರಾದ ಇಬ್ಬರು ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ: ಶಾಲಾ ಆಡಳಿತ ಮಂಡಳಿ ಎಡವಟ್ಟಿನಿಂದ ಇಬ್ಬರು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಿಂದ ವಂಚಿತರಾದ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ಉದಯ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಬರದೇ ಪರೀಕ್ಷೆ ಬರೆಯಲು ಸಧ್ಯವಾಗಿಲ್ಲ.

Home add -Advt

ಶಾಲೆಯ 17 ಮಕ್ಕಳು ಇಂದು ಪರೀಕ್ಷೆ ಬರೆಯಬೇಕಿತ್ತು. ಅದ್ರಂತೆ ನಿನ್ನೆ ಎಲ್ಲರಿಗೂ ಹಾಲ್ ಟಿಕೆಟ್ ಬಂದಿತ್ತು. ಆದರೆ ಇಬ್ಬರಿಗೆ ಮಾತ್ರ ಬಂದಿರಲಿಲ್ಲ. ಹೀಗಾಗಿ ಪರೀಕ್ಷೆ ಹಾಜರಾಗಲು ಸಾಧ್ಯವಾಗದಕ್ಕೆ ಬಾಲಕರು ಮತ್ತು ಪೋಷಕರು ಕಣ್ಣೀರಿಟ್ಟಿದ್ದಾರೆ.

ತಮೀಮ್ ಮತ್ತು ಪ್ರಥಮ್ ಎಂಬ ಮಕ್ಕಳು ಪರೀಕ್ಷೆಯಿಂದ ವಂಚಿತರಾದವರು. ಅವರ ಪೋಷಕರಿಗೆ ನಿನ್ನೆ ಸಂಜೆ ಕರೆಮಾಡಿದ ಶಾಲಾ ಪ್ರಾಂಶುಲಾರು, ಏನೋ ತಾಂತ್ರಿಕ ಸಮಸ್ಯೆಯಿಂದ ಇಬ್ಬರಿಗೆ ಹಾಲ್ ಟಿಕೆಟ್ ಬಂದಿಲ್ಲ ಅಂತ ಹೇಳಿದ್ದಾರೆ. ಈ ಸುದ್ದಿ ಕೇಳಿ ಪೋಷಕರು ಮತ್ತು ಮಕ್ಕಳಿ ಶಾಕ್ ಆಗಿದೆ. ಆದರೂ ಇಂದು ಬೆಳಗ್ಗೆ ಶಾಲೆಯ ಬಳಿ ಬಂದು ಹಾಲ್ ಟಿಕೆಟ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಪೋಷಕರು ಮತ್ತು ಗ್ರಾಮಸ್ಥರು ಶಾಲೆ ಬಳಿ ಪ್ರತಿಭಟನೆ ನಡೆಸಿದರು. ಶಾಲೆಯ ಪ್ರಾಂಶುಪಾಲ ಹೇಮಂತ್​​ರನ್ನ ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನ ಕೇಳಿದರೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಬಿಇಒ ರಿಜೆಕ್ಟ್ ಮಾಡಿರೋದ್ರಿಂದ ಈ ರೀತಿ ಆಗಿದೆ ಎನ್ನುತ್ತಾರೆ. ಆದರೆ ಇದನ್ನ ಬಿಇಒ ಮಹೇಶ್ ತಳ್ಳಿ ಹಾಕಿದ್ದಾರೆ.

ಶಾಲಾ ಸಿಬ್ಬಂದಿ ಸರಿಯಾಗಿ ಲಾಗಿನ್ ಆಗಿ ವಿದ್ಯಾರ್ಥಿಗಳ ವಿವರವನ್ನು ಭರ್ತಿ ಮಾಡದ್ದರಿಂದಲೇ ಈ ಎಡವಟ್ಟು ಆಗಿದೆ ಎನ್ನೋದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದ. ಬಾಲಕ ತಮೀಮ್​ಗೆ ಈಗಾಗಲೇ ಶಾಲೆಯಿಂದ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಲಾಗಿದೆ ಎಂಬಂತೆ ಶಿಕ್ಷಣ ಇಲಾಖೆಯ ವೆಬ್​ ಪೇಜ್​ನಲ್ಲಿ ಮಾಹಿತಿ ದಾಖಲಾಗಿದೆಯಂತೆ. ಹಾಗಾಗಿ ಆತನಿಗೆ ಹಾಲ್ ಟಿಕೆಟ್ ಬಂದಿಲ್ಲ ಎಂಬುದು ಅಧಿಕಾರಿಗಳ ವಾದ. ಆದರೆ ಇತ್ತ ತಮೀಮ್​ 10ನೇ ತರಗತಿಯ ಸಂಪೂರ್ಣ ಶುಲ್ಕ ಪಾವತಿಸಿ ಇಡೀ ಒಂದು ವರ್ಷ ಓದಿದ್ದಾನೆ.

ಅಷ್ಟೇ ಅಲ್ಲದೆ ಈ ಶಾಲೆಗೆ ಕೇವಲ 8ನೇ ತರಗತಿವರಗೆಗೆ ಮಾತ್ರ ಅನುಮತಿ ಇದ್ದು ಇಲ್ಲಿ 9 ಮತ್ತು 10ನೇ ತರಗತಿಯನ್ನ ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಪೋಷಕರಿಗೆ ತಿಳಿ ಹೇಳಿದ್ದರೂ ಅವರಿಗೆ ಅದು ಅರ್ಥ ಆಗಿಲ್ಲ ಅನ್ನೋದು ಅವರ ವಾದ. ಇಷ್ಟೆಲ್ಲಾ ಆದರೂ ಶಾಲಾ ಆಡಳಿತ ಮಂಡಳಿಯ ಒಬ್ಬನೇ ಒಬ್ಬ ಸದಸ್ಯ ಶಾಲೆಯತ್ತ ಸುಳಿಯಲಿಲ್ಲ. ಪ್ರಾಂಶುಪಾಲರನ್ನ ಮುಂದೆ ಬಿಟ್ಟು ಅವರು ನಾಪತ್ತೆಯಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ಎಡವಟ್ಟಿನಿಂದ ಇಬ್ಬರು ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿದೆ.


Related Articles

Back to top button