Belagavi NewsBelgaum NewsKannada NewsKarnataka NewsNationalPolitics

*ಶೆಟ್ಟರ್ ಆಗ ಆಡಿದ್ದ ನುಡಿಮುತ್ತುಗಳನ್ನು ಎಲ್ಲರೂ ಕೇಳಿದ್ದಾರೆ: ಡಿಕೆ ಶಿವಕುಮಾರ್ ಟಾಂಗ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಟೂರ್ ಕರೆದುಕೊಂಡು ಹೋಗಗುತ್ತೇನೆ. ಕಾಂಗ್ರೆಸ್ ಗೆ ಬಂದಾಗ ಎನೇನೂ ಮಾತಾಡಿದ್ರೂ ಗೊತ್ತಿದೆ. ಅವರ ನುಡಿಮುತ್ತುಗಳನ್ನು ಎಲ್ಲರೂ ಕೇಳಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಗೆ ಡಿಸಿಎಂ ಡಿಕೆ ಶಿವಕುಮಾರ ಅವರು ಟಾಂಗ್ ಹೊಟ್ಟರು.‌

ಯಾರದ್ದೋ ದುಡ್ಡು ಕಾಂಗ್ರೆಸ್ ಸಮಾವೇಶ ಎಂಬ ಶೆಟ್ಟರ್ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಬಂದಾಗ ಎನೇನೂ ಮಾತಾಡಿದ್ದರು ಗೊತ್ತಿದೆ. ಅವರ ನುಡಿಮುತ್ತುಗಳನ್ನು ಎಲ್ಲರೂ ಕೇಳಿದ್ದಾರೆ ಎಂದರು.‌

ನಾನು ಒಬ್ಬ ದೈವ ಭಕ್ತ, ಪೂಜೆ ಮಾಡಿ ಶಕ್ತಿ ನೆನಪಿಸ್ಕೊಂಡು ಮನೆಯಿಂದ ಹೊರ ಬರ್ತೇನಿ. ದೇವಸ್ಥಾನಕ್ಕೆ ಹೋಗಿ ‌ಬರ್ತೇನಿ, ನಿಮ್ಮಿಂದ ರಕ್ಷಣೆ ಬೇಕಪ್ಪಾ ಎಂದರು

ಕಾರ್ಯಕ್ರಮದ ಸಿದ್ಧತೆ ಎಲ್ಲವೂ ರೆಡಿ ಆಗ್ತಿದೆ. ಇಂದು ಸಂಜೆ ಎಲ್ಲಾ ಟ್ರಯಲ್ ನೋಡುತ್ತೇವೆ. ಪರಮೇಶ್ವರ್ ಅವರು ಕೂಡ ಮುಂಚಿತವಾಗಿ ಬರ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ. ಜ.21ರಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬರ್ತಾರೆ. ಈ ದಿನ‌ ಮೊದಲು ಗಾಂಧಿಯವರು ಪುತ್ಥಳಿ ಅನಾವರಣ ಮಾಡುತ್ತಾರೆ. ಬಳಿಕ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಸದಸ್ಯತ್ವ ತೆಗೆದುಕೊಂಡವರನ್ನು ಬಿಟ್ಟು ಯಾರು ಬೇಕಾದರೂ ಸಮಾವೇಶಕ್ಕೆ ಬರಬಹುದು ಎಂದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button