Kannada NewsKarnataka NewsLatest

ವಿಟಿಯುದಲ್ಲಿ ಕನ್ನಡ ರಾಜ್ಯೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿಶ್ವೇಶ್ವರಯ್ಯ ತಾ೦ತ್ರಿಕ ವಿಶ್ವವಿದ್ಯಾಲಯದಲ್ಲಿ ೬೪ನೇ ಕರ್ನಾಟಕ ರಾಜ್ಯೋತ್ಸವವನ್ನು  ಸ೦ಭ್ರಮದಿ೦ದ ಆಚರಿಸಲಾಯಿತು. ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ವಿತಾವಿ ಕುಲಪತಿ  ಡಾ. ಕರಿಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

’ಕನ್ನಡ ಭಾಷೆ ಅತ್ಯಂತ ಸಂಪತ್ಭರಿತ ಸಾಹಿತ್ಯ ಹಾಗೂ ವೈಚಾರಿಕತೆಯಿಂದ ಕೂಡಿದೆ. ನಮ್ಮ ಮಕ್ಕಳಿಗೆ ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಕೊಡಬೇಕಾದ ಅವಶ್ಯಕತೆಯಿದೆ.’ ಎಂದು ಹೇಳಿದರು.
ವಿತಾವಿ ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ, ಹಣಕಾಸು ಅಧಿಕಾರಿ ಸಪ್ನಾ ಎಂ.ಎ. ಸ್ಥಾನಿಕ ಅಭಿಯ೦ತರರಾದ ಹೇಮಂತಕುಮಾರ, ಎನ್.ಎಸ್.ಎಸ್. ಅಧಿಕಾರಿ ಡಾ. ಅಪ್ಪಾಸಾಬ ಎಲ್.ವಿ, ಇತರ ಅಧಿಕಾರಿ ಹಾಗೂ ಸಿಬ್ಬ೦ದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಮಾರ೦ಭದಲ್ಲಿ ಪಾಲ್ಗೊ೦ಡಿದ್ದರು.

 

Home add -Advt

Related Articles

Back to top button