Kannada NewsLatest

*KPTCL ಪರೀಕ್ಷಾ ಅಕ್ರಮ; ಮತ್ತೋರ್ವ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಟಿಸಿ ಎಲ್ ಪರೀಕ್ಷಾ ಅಕರಮಕ್ಕೆ ಸಂಬಂಧಿಸಿದಂತೆ ಗೋಕಾಕ್ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಹನಮಂತ ಮಲ್ಲಪ್ಪ ಗುದಿಗೊಪ್ಪ (22) ಬಂಧಿತ ಆರೋಪಿ. ಗೋಕಾಕ ತಾಲೂಕಿನ ಮಮದಾಪೂರ ರಸ್ತೆ ಉಪ್ಪಾರಟ್ಟಿಯ ನಿವಾಸಿ ಎಂದು ತಿಳಿದುಬಂದಿದೆ.

ಈತ ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಪರೀಕ್ಷೆಯಲ್ಲಿ ಆರೋಪಿತರಾದ ಸಂಜೀವ ಭಂಡಾರಿ, ಬಾಳೇಶ ಕಟ್ಟಿಕಾರ್, ಸಿದ್ದಪ್ಪ ಮದಿಹಳ್ಳಿ, ಭೀಮಪ್ಪ ಗುದಿಗೋಪ್ಪ ಹಾಗೂ ಇನ್ನಿತರ ಆರೋಪಿತರೊಂದಿಗೆ ಸೇರಿ ಸಂಚು ರೂಪಿಸಿ, ಆರೋಪಿತರಾದ ಬಾಳೇಶ ಕಟ್ಟಿಕಾರ ಮತ್ತು ಮಂಜುನಾಥ ಮಾಳಿ ಇವರೊಂದಿಗೆ ಸೇರಿ 07 ಜನ ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಕೊಟ್ಟು ಕಳುಹಿಸಿ ಪರೀಕ್ಷೆ ಬರೆಯಿಸಿದ್ದ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

*PSI ನೇಮಕಾತಿ ಅಕ್ರಮ: ಕಿಂಗ್ ಪಿನ್ ಮನೆ ಮೇಲೆ ED ದಾಳಿ*

https://pragati.taskdun.com/psi-scameaccused-r-d-patiled-raid/

Related Articles

Back to top button