Politics

*ನನ್ನ ಕರ್ತವ್ಯ ಮಾಡುತ್ತೇನೆ, ಮಿಕ್ಕಿದ್ದು ಪಕ್ಷ ತೀರ್ಮಾನ ಮಾಡುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ನಾನು ನನ್ನ ಕರ್ತವ್ಯ ಮಾಡುತ್ತೇನೆ. ಮಿಕ್ಕಿದ್ದು ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ನೀವು ಸಿಎಂ ಆಗಲಿ ಎಂದು ಸ್ವಾಮೀಜಿಗಳು ಆಶೀರ್ವಾದ ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ “ಧರ್ಮಗುರುಗಳು ಆಶೀರ್ವಾದ ಮಾಡುವಾಗ ನಾವು ಏನು ಹೇಳಲು ಸಾಧ್ಯ? ಅದು ಅವರ ಇಚ್ಛೆ. ಏನೇ ಇದ್ದರೂ ನಮ್ಮ ಪಕ್ಷವಷ್ಟೇ. ಪಕ್ಷ ಮುಖ್ಯ. ಪಕ್ಷ ಏನು ತೀರ್ಮಾನ ಮಾಡುತ್ತದೋ, ಅದನ್ನು ನಾವು ಮಾಡುತ್ತೇವೆ. ನಾನು ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಏನು ಕೆಲಸ ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ನಾನು ಆತುರದಲ್ಲಿಲ್ಲ” ಎಂದು ತಿಳಿಸಿದರು.

ಎಸ್.ಟಿ ಸೋಮಶೇಖರ್ ಅವರು ನಿಮ್ಮ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಕೇಳಿದಾಗ, “ಅವರು ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button