Belagavi NewsBelgaum NewsCrimeKannada NewsKarnataka NewsNationalPolitics

*ಖಾನಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾ ಸೇವನೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಸ್ಟೇಶನ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಆರೋಪಿತನಾದ ಪ್ರಾನ್ಸಿಸ್ ಪಾಸ್ಕು ಸೋಜ ಕಾನೂನು ಬಾಹಿರವಾಗಿ ತಮ್ಮ 3 ಸಾವಿರ ರೂಪಾಯಿ ಮೌಲ್ಯದ 135 ಗ್ರಾಂ ತೂಕದಷ್ಟು ಒಣಗಿದ ತಪ್ಪಲು- ಬೀಜವಿರುವ ಗಾಂಜಾ ಮಾದಕ ಪದಾರ್ಥವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿ. ಈ ವೇಳೆ ವಶಕ್ಕೆ ಪಡೆದ ಪೊಲೀಸರು ಖಾನಾಪೂರ ಪೋಲೀಸ್ ಠಾಣಾ ಅಪರಾಧ ಸಂಖ್ಯೆ: 12/2026 ಕಲಂ: 20 [ಬಿ] ಎನ್.ಡಿ.ಪಿ.ಎಸ್ ಕಾಯ್ದೆ: 1985 ನೇ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಪ್ರಾನ್ಸಿಸ್ ಪಾಸ್ತು ಸೋಜನನ್ನು ವಿಚಾರಣೆ ಒಳ ಪಡಿಸಿದಾಗ  ಏಸುನಂದ್ ಪ್ರಾನ್ಸಿಸ್ ಸೋಜ ಇವನು ಮಾರಾಟ ಮಾಡಲು ತಂದು ಕೊಟ್ಟಿದ್ದ 

ಈ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪಿಗಳಾದ ರೇಹಮಾನ ಕುತ್ಥುದ್ದೀನ ಇಟಗಿ ಹಾಗೂ ರೋಹಿತ ದತ್ತಾರಾಮ ರಗಡೆ  ಇವರಿಗೆ ವಶಕ್ಕೆ ಪಡೆದು ಕ್ರಮ ಜರುಗಿಸಲಾಗಿದೆ. 

ಆರೋಪಿ ಪ್ರಾನ್ಸಿಸ್ ಸೋಜ ಇವನಿಗೆ ಗಾಂಜಾ ತಂದು ಕೊಟ್ಟ ಆರೋಪಿ ಏಸುನಂದ್ ಸೋಜ ಇವನ ಹಾಗೂ ಗಾಂಜಾ ಖರೀದಿಸಿದ ಆರೋಪಿತರ ಪತ್ತೆಗೆ ಪೊಲೀಸರು ಜಾಲ ಬಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button