Film & Entertainment
*ಗ್ರ್ಯಾಂಡ್ ಸಪ್ರೈಸ್ ಫಂಕ್ಷನ್ ಕೊಡ್ತೀವಿ ಮೇಡಂ ಗೆ: ಲಕ್ಷ್ಮೀ ಹೆಬ್ಬಾಳ್ಕರ್ ನೋಡಲು ಆಸ್ಪತ್ರೆಗೆ ಬಂದ ಸಾದು ಕೋಕಿಲ*
ಪ್ರಗತಿವಾಹಿನಿ ಸುದ್ದಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನೋಡಲೆಂದು ಹಾಸ್ಯ ನಟ, ಸಂಗೀತ ನಿರ್ದೇಶಕ ಸಾದು ಕೋಕಿಲ ಬೆಳಗಾವಿ ಆಸ್ಪತ್ರೆಗೆ ಭೇಟಿನೀಡಿ, ಸಚಿವರ ಆರೊಗ್ಯ ವಿಚಾರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸಾದು ಕೋಕಿಲ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮುಂದಿನ ತಿಂಗಳು ಒಂದು ಗ್ರ್ಯಾಂಡ್ ಸಪ್ರೈಸ್ ಫಂಕ್ಷನ್ ಇದೆ. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಚಿವರು ಶೀಘ್ರವಾಗಿ ಗುಣಮುಖರಾಗಲೆಂಬುದೇ ನಮ್ಮೆಲ್ಲರ ಹಾರೈಕೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ