ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಕಿಟೆಕ್ಚರ್ ಪ್ಲಾನಿಂಗ್ ಮಹಾವಿದ್ಯಾಲಯದಲ್ಲಿ ನಡೆದ ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಆಫ್ ಆರ್ಕಿಟೆಕ್ಚರ್(ನಾಸಾ)ದ ವಲಯ ಮಟ್ಟದ ಮೇಳದಲ್ಲಿ ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ೩ ಪ್ರತಿಷ್ಠಿತ ಟ್ರೋಫಿಗಳೊಂದಿಗೆ ೫ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇದರಲ್ಲಿ ರಾಷ್ಟ್ರದ ಪ್ರತಿಷ್ಠಿತ ೪೯ ಮಹಾವಿದ್ಯಾಲಯದಿಂದ ಸುಮಾರು ೨೧೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿ ಐ ಟಿ ಯ ಆರ್ಕಿಟೆಕ್ಚರ್ ವಿಭಾಗದಿಂದ ೫೪ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ. ಅರ್ಚನಾ ಪಾಟೀಲ ಸಂಯೋಜಕರಾಗಿ ಈ ಮೇಳದಲ್ಲಿ ಪಾಲ್ಗೊಂಡಿದ್ದರು.
ಈ ಸ್ಪರ್ಧೆಯಲ್ಲಿ ಆರ್ಕಿಟೆಕ್ಚರ್ ವಿಭಾಗ ಪ್ರತಿಷ್ಠಿತ ರೂಬೆನ್ಸ್ ಟ್ರೋಫಿಗೆ ಜುರರ್ಸ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಹಾಗೂ ನೃತ್ಯ ಮತ್ತು ಫ್ಯಾಷನ್ ವಿಭಾಗದಲ್ಲಿ ಟ್ರೋಫಿಗಳನ್ನೂ ಗೆದ್ದುಕೊಂಡಿತು. ಜೊತೆಗೆ ಸ್ಪಾಟ್ ಇವೆಂಟ್‌ಗಳಲ್ಲಿ ಎರಡು ಬಹುಮಾನಗಳನ್ನು ಗೆದ್ದಿದೆ.
ಜಿಐಟಿ ವಿದ್ಯಾರ್ಥಿಗಳ ಈ ಸಾಧನೆಯನ್ನು ಕೆ ಎಲ್ ಎಸ್ ಸಂಸ್ಥೆಯ ಚೇರಮನ್ ಪ್ರದೀಪ್ ಸಾಹುಕಾರ, ಜಿಐಟಿ ಆಡಳಿತ ಮಂಡಳಿ ಚೇರಮನ್, ಪ್ರಾಂಶುಪಾಲರಾದ ಪ್ರೊ. ಡಿ. ಎ. ಕುಲಕರ್ಣಿ, ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥರಾದ ಪ್ರೊ. ನಿಶಿತಾ ಆರ್. ತಡಕೋಡ್ಕರ್ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ