ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾಗನೂರು ರುದ್ರಾಕ್ಷಿಮಠ ಇವತ್ತು ಗ್ರಾಮೀಣ ಭಾಗದಿಂದ ರಾಜಧಾನಿ ಬೆಂಗಳೂರು, ದೆಹಲಿ ಅಷ್ಟೇ ಅಲ್ಲ ವಿಶ್ವದಲ್ಲೇ ಶಿಕ್ಷಣ ಕ್ರಾಂತಿಯನ್ನು ಮಾಡಿದೆ. ಇದರ ಹಿನ್ನೆಲೆ ಮಹಾಪ್ರಸಾದಿ ಶ್ರೀ ಡಾ. ಶಿವ ಬಸವ ಮಹಾಸ್ವಾಮಿಗಳು. ಅವರ ಕರ್ತೃತ್ವ ಶಕ್ತಿ ಪ್ರಭು ಮಹಾಸ್ವಾಮಿಗಳ ಸಾಮಾಜಿಕ ಪರಿಜ್ಞಾನ, ಸಿದ್ದರಾಮ ಮಹಾಸ್ವಾಮಿಗಳ ಶ್ರಮ, ಇವತ್ತು ಶ್ರೀಮಠ ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಾಗನೂರು ಶ್ರೀಮಠದಲ್ಲಿ ಜರುಗಿದ ನಿರಂಜನ ಪಟ್ಟಾಧಿಕಾರ ಮಹೋತ್ಸವದ ಹಾಗೂ ಬಸವಪುರಾಣ ಕಾರ್ಯಕ್ರಮದಲ್ಲಿ ಡಾ. ಸಾವಳಗೀಶ್ವರ ದೇವರಿಗೆ ಚಿನ್ನದ ಉಂಗುರವನ್ನು ತೊಡಸುತ್ತ ಮಾತನಾಡಿದರು.
ಈ ಮಠದ ಅಧಿಕಾರದ ಚುಕ್ಕಾಣಿಯನ್ನು ಡಾ. ಸಾವಳಗೀಶ್ವರ ದೇವರು ವಹಿಸಿಕೊಳ್ಳುವ ಮುಖಾಂತರ ಇನ್ನೂ ಶ್ರೀಮಠವನ್ನು ಉನ್ನತಮಟ್ಟಕ್ಕೆ ಬೆಳೆಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದರು.
ವೇದಿಕೆ ಮೇಲೆ ಕಮತಗಿ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಮಹಾಸ್ವಾಮಿಗಳು, ಗುಳೇದಗುಡ್ಡ, ಕಡಕೋಳ ಹೀಗೆ ಹಲವಾರು ಸ್ವಾಮಿಗಳು ಉಪಸ್ಥಿತರಿದ್ದರು. ಹಂದಿಗುಂದ ಆಡಿ ಮಠದ ಶಿವಾನಂದ ಮಹಾಸ್ವಾಮಿಗಳು ಬಸವ ಪುರಾಣವನ್ನು ನೆರವೇರಿಸಿದರು. ನಿವೃತ್ತ ನ್ಯಾಯಮೂರ್ತಿ ಪಾಶ್ಚಾಪುರಿ ಅವರು ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ