ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾಡಿದ ಸೀಕ್ರೆಟ್ ಭಾಷಣ ವೈರಲ್ ಆದ ಬೆನ್ನಿಗೇ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ.
ಈ ವೀಡಿಯೋ ನನ್ನದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಆದರೆ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಹಲವು ಪ್ರಮುಖರು ಇದು ಯಡಿಯೂರಪ್ಪನವರ ಧ್ವನಿ ಅಲ್ಲ, ವೀಡಿಯೋ ನಕಲಿ ಎಂದಿದ್ದಾರೆ.
ಇದರ ಬೆನ್ನಿಗೇ ಬಿಜೆಪಿ ವೀಡಿಯೋ ಬಹಿರಂಗಪಡಿಸಿದವರನ್ನು ಕಂಡುಹಿಡಿಯಲು ಆಂತರಿಕ ತನಿಖೆ ನಡೆಸುವ ಸಾಧ್ಯತೆ ಇದೆ.
ಕಾಂಗ್ರೆಸ್ ದೂರು
ಆಪರೇಶನ್ ಕಮಲ ನಡೆಸಿದ್ದನ್ನು ಒಪ್ಪಿಕೊಂಡಿರುವ ಯಡಿಯೂರಪ್ಪ ಮಾಡಿದ ಭಾಷಣದ ಪ್ರತಿಯೊಂದಿಗೆ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಯಡಿಯೂರಪ್ಪ ಅವರನ್ನು ತಕ್ಷಣ ಮುಖ್ಯಮಂತ್ರಿ ಸ್ಥಾನದಿದ ವಜಾ ಮಾಡಬೇಕೆಂದು ಆಗ್ರಹಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಂಸದ ಉಗ್ರಪ್ಪ ಮೊದಲಾದವರು ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ ಇಷ್ಟು ದಿನ ಶಾಸಕರು ವರಾಗಿಯೇ ಹೊರಗೆ ಬಂದಿದ್ದಾರೆ ಎನ್ನುತ್ತಿದ್ದ ಯಡಿಯೂರಪ್ಪ ಈ ಸತ್ಯವನ್ನು ಬಹಿರಗಪಡಸಿದ್ದಾರೆ ಎಂದಿದ್ದಾರೆ.
ಯಡಿಯೂರಪ್ಪ ಭಾಷಣ ಬಹಿರಂಗ; ಪ್ರಗತಿವಾಹಿನಿಗೆ ವೀಡಿಯೋ ಲಭ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ