
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಕ್ಯಾಬ್ ಬುಕ್ ಮಾಡಿ ಹತ್ತಿದ್ದ ಯುವತಿಗೆ ಕ್ಯಾಬ್ ಚಾಲಕ ಹಾಗೂ ಮ್ಮತ್ತೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಯುವತಿ ಕಮ್ಮನಹಳ್ಳಿಯಿಂದ ಚಿಕ್ಕಮ್ಮನ ಲೇಔಟ್ ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಹತ್ತಿದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದಿಯ್ದು ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ತಕ್ಷಣ ಯುವತಿ ಕಾರಿನಿಂದ ಇಳಿದು ಓಡಿದ್ದಾಳೆ ಈ ವೇಳೆ ಚಾಲಕ ಆಕೆಯನ್ನು ಕೆಳಗೆ ಕೆಡವಿದ್ದಾನೆ. ಇನ್ನೋರ್ವ ಕೂಡ ಯುವತಿಯ ಮೇಲೆ ಎರಗುತ್ತಿದ್ದಂತೆ ಯುವತಿ ಜೋರಾಗಿ ಕಿರುಚಿ, ಕೂಗಾಡಲಾರಂಭಿಸಿದ್ದಾಳೆ. ಯುವತಿಯ ಕೂಗಾಟ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಇಬ್ಬರು ಕಾಮುಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಯುವತಿಯ ದೂರಿನ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ