ಪ್ರಗತಿವಾಹಿನಿ ಸುದ್ದಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದೆ. ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿದರು.
ಸಂಸತ್ ಕಲಾಪ ಆರಂಭವಾಗುತ್ತಿದಂತೆಯೇ ವಿಪಕ್ಷಗಳು ಗದ್ದಲ-ಕೋಲಾಹಲ ಆರಂಭಿಸಿದ್ದು, ವಿಪಕ್ಷಗಳ ಗದ್ದಲದ ನಡುವೆಯೇ ವಿತ್ತ ಸಚಿವರು ಕೇಂದ್ರ ಬಜೆಟ್ ಮಂಡನೆ ಆರಂಭಿಸಿದರು.
ಈ ಬಜೆಟ್ ನಲ್ಲಿ ಬಡವರು, ಯುವಕರು, ರೈತರು, ಮಹಿಳೆಯ ಅಭಿವೃದ್ಧಿ ಸೇರಿದಂತೆ ಒಟ್ಟು ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು. ಈ ಬಜೆಟ್ ದೇಶದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಒಟ್ಟಾರೆ ಅಭಿವೃದ್ಧಿ ಸಾಧಿಸಲು ಪೂರಕವಾಗಿದೆ ಎಂದು ಹೇಳಿದರು.
ಬಜೆಟ್ ಪ್ರಮುಖಾಂಶಗಳು:
ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡಲು 1.5 ಲಕ್ಷ ಕೋಟಿ ಮೀಸಲು
ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನಸರ್ ಕೇಂದ್ರ ಸ್ಥಾಪನೆ
ಬಿಹಾರಕೆ ಮಖಾನ ಮಂಡಳಿ
ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 5 ಲಕ್ಷಕ್ಕೆ ಹೆಚ್ಚಳ
ವೈದ್ಯಕೀಯ ಕಾಲೇಜುಗಳಲ್ಲಿ 10 ಸಾವಿರ ಸೀಟುಗಳ ಹೆಚ್ಚಳ
ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ನಲ್ಲಿ ಆಟಿಕೆಗಳ ತಯಾರಿಕೆಗೆ ಆದ್ಯತೆ
ಎಸ್ ಸಿ ಎಸ್ ಟಿ ಮಹಿಳೆಯರಿಗೆ ಸಾಲದ ಯೋಜನೆ ಜಾರಿ
ಅಸ್ಸಾಂ ನಲ್ಲಿ ಯೂರಿಯಾ ಸ್ಥಾವರ ಸ್ಥಾಪನೆ
ಎಂಎಸ್ ಎಂ ಇ ಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಳ
ವಾರ್ಷಿಕ 12 ಲಕ್ಷದ ವರೆಗೆ ತೆರಿಗೆ ವಿನಾಯಿತಿ
ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ
ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯ
ಪಾದರಕ್ಷೆ ಹಾಗೂ ಚರ್ಮದ ಉದ್ಯಮಕ್ಕೆ ಯೋಜನೆ
ಇಂಡಿಯಾ ಪೋಸ್ಟ್ ಸಂಸ್ಥೆಯನ್ನು ಪ್ರಮುಖ ಸಾರ್ವಜನಿಕ ಲಾಜೆಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ