ಪ್ರಗತಿವಾಹಿನಿ ಸುದ್ದಿ: ಫೈನಾನ್ಸ್ ನವರ ಕಿರುಕುಳಕ್ಕೆ ನೊಂದು ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಕೂಕಿನ ಮಹಿಳೆ ಪ್ರೇಮಾ ಎಂಬುವವರು ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಸಾವಿನ ಸುದ್ದಿ ಕೇಳಿ ಇದೀಗ ಮಗ ಕೂಡ ಆತ್ಮಹತ್ಯೆ ಮಾಡಿಂಡಿದ್ದಾನೆ.
ರಂಜಿತ್ (31) ಆತ್ಮಹತ್ಯೆಗೆ ಶರಣಾದ ಮಗ. ಮಳವಳ್ಳಿ ಬಳಿಯ ಹಲಗೂರು ಕೆರೆಗೆ ಹಾರಿ ರಂಜಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ದಿನಗಳ ಹಿಂದೆ ರಂಜಿತ್ ತಾಯಿ ಪ್ರೇಮಾ ಸಾವಿಗೆ ಶರಣಾಗಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಅನಾರೋಗ್ಯಪೀಡಿತ, ಅಂಗವಿಕಲ ಮಗ ರಂಜಿತ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆಯೇ ರಂಜಿತ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
ರಂಜಿತ್ ಶವ ಇಂದು ಹಲಗೂರು ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ