Belagavi NewsBelgaum NewsKannada NewsKarnataka News

*ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡಕ್ಕೆ ನೀರು ಬಿಡದಿರಿ: ಸಂಘಟನೆಗಳ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವುದನ್ನು ವಿರೋಧಿಸಿ ಬೆಳಗಾವಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.

ಹಿಡಕಲ್ ಜಲಾಶಯದ ನೀರನ ಉಳಿವಿಗಾವಿ ಅನೇಕ ಸಂಘಟನೆಗಳು ಒಂದಾಗಿ ಬೆಳಗಾವಿಯಲ್ಲಿ ನಮ್ಮ‌ ನೀರು ನಮ್ಮ ಹಕ್ಕು ಅಭಿಯಾನ ಆರಂಭವಾಗಿದೆ. ಹಾಗಾಗಿ ಇಂದು ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದರು, ಬಳಿಕ ಡಿಸಿ ಚೇಂಬರ್‌ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದ ಕಾರಣಕ್ಕೆ ‌ಡಿಸಿ ಚೇಂಬರ್ ಎದುರು ಕುಳಿತು ಪ್ರತಿಭಟನೆ ನಡೆಸಿದರು.‌ ಡಿಸಿ ಮಹ್ಮದ್ ರೋಷನ್ ಸ್ಥಳಕ್ಕೆ ಬರಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದರು.

ಬಳಿಕ ಡಿಸಿ ಮೊಹಮ್ಮದ ರೋಷನ್‌ ಸ್ಥಳಕ್ಕೆ ಆಗಮಿಸಿದ್ದು, ಡಿಸಿ ಮುಂದೆ ಯೋಜನೆಯ ಕಾಮಗಾರಿ ತಕ್ಷಣವೆ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಇನ್ನು ಮನವಿ ಸ್ವೀಕರಿಸಿರುವ ಜಿಲ್ಲಾಧಿಕಾರಿಗಳು ಕಾಮಗಾರಿ ಸಂಬಂಧ ನೋಟಿಸ್ ಜಾರಿ ಮಾಡಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button