Politics

*ಸುಗ್ರೀವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು*

ಪ್ರಗತಿವಾಹಿನಿ ಸುದ್ದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ತಣ್ಣೀರೆರಚಿದ್ದಾರೆ. ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಗೆ ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ.

ಹಲವು ಸ್ಪಷ್ಟನೆ ಕೇಳಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ. ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣುತ್ತಿಲ್ಲ. ಇರುವ ಕಾನೂನುಗಳಲ್ಲಿಯೇ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಪಾಲರು ಸುಗ್ರಿವಾಜ್ಞೆಯನ್ನು ಹಿಂದಿರುಗಿಸುತ್ತಾ, ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

೧ ಸುಗ್ರಿವಾಜ್ಞೆಯ ಕಲಂ (೧೪) ರಲ್ಲಿ ನೊಂದಾಯಿತವಲ್ಲದ ಮತ್ತು ಲೈಸೆನ್ಸ್ ರಹಿತ ಕಿರು ಹಣಕಾಸು ಸಂಸ್ಥೆ ಸುಗ್ರಿವಾಜ್ಞೆಯ ದಿನಾಂಕದಂದು ಬಾಕಿ ಇರುವ ಸಾಲವನ್ನು ಸಂಪೂರ್ಣವಾಗಿ ವಿಮೋಚನೆ ಮಾಡಲು ಪ್ರಸ್ತಾಪಿಸಲಾಗಿದೆ.

ಅ. ಮುಂದುವರೆದು, ಸಾಲಗಾರನಿಂದ ಬಡ್ಡಿಯೂ ಸೇರಿದಂತೆ ಸಾಲದ ಮೊತ್ತವನ್ನು ವಸೂಲಿ ಮಾಡುವ ಯಾವುದೇ ಪ್ರಕ್ರಿಯೆಯನ್ನು ನ್ಯಾಯಾಲಯಗಳು ಮನ್ನಿಸದಿರಲು ಮತ್ತು ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ನಿಲ್ಲಿಸಲು ಸುಗ್ರಿವಾಜ್ಞೆ ಪ್ರಸ್ತಾಪಿಸುತ್ತದೆ.

ಆ. ಸಮಾಜದ ಅಬಲ ವ್ಯಕ್ತಿಗಳನ್ನು ರಕ್ಷಿಸಬೇಕಾದದ್ದು ಸಂಶಯಾತಿತವಾಗಿ ಸರ್ಕಾರದ ಕರ್ತವ್ಯವೇ ಆಗಿದ್ದರೂ, ಅಗತ್ಯವಿರುವ ವ್ಯಕ್ತಿಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಸೂಕ್ತ ಸಾಧಕ-ಬಾಧಕಗಳ ವ್ಯವಸ್ಥೆಯ ಅಡಿಯಲ್ಲಿ ಸಾಲ ನೀಡಿದ ವ್ಯಕ್ತಿಗಳ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ.

ಇ. ಈ ರೀತಿ ಎಲ್ಲಾ ಬಾಕಿ ಸಾಲಗಳನ್ನು ವಿಮೋಚನೆಗೊಳಿಸಿದರೆ ಕಾನೂನು ಬದ್ಧ ಮತ್ತು ನೈಜ ಸಾಲ ನೀಡಿದವರು ತೊಂದರೆ ಅನುಭವಿಸಬಹುದು. ಮುಂದುವರೆದು, ಬಾಕಿಯಿರುವ ಸಾಲದ ಮೊತ್ತವನ್ನು ವಸೂಲಿ ಮಾಡಲು ಯಾವುದೇ ದಾರಿ ಕಾಣದೆ ಕಾನೂನಾತ್ಮಕ ಹೋರಾಟಕ್ಕೆ ಕಾರಣವಾಗಬಹುದು.

ಈ. ನೈಸರ್ಗಿಕ ನ್ಯಾಯದ ಒಪ್ಪಿತ ತತ್ವದಂತೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಪರಿಹಾರಗಳಿಗಾಗಿ ಹೋರಾಟ ಮಾಡುವ ಹಕ್ಕು ಹೊಂದಿದ್ದಾರೆ. ಈ ರೀತಿಯಾಗಿ ವ್ಯಕ್ತಿಯೊಬ್ಬನು ತನ್ನ ಹಕ್ಕುಗಳಿಗಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಡುವುದನ್ನು ತಪ್ಪಿಸುವುದು ಭಾರತ ಸಂವಿಧಾನದ ಅನುಚ್ಛೇದ (೧೯) ಮತ್ತು (೩೨) ರನ್ವಯ ಕೊಡಮಾಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ನೊಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸೆನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿದರೆ ಅದಕ್ಕೆ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವು ಅಲ್ಲ ಯೋಗ್ಯವು ಅಲ್ಲ.

ಕಾನೂನಾತ್ಮಕ ಪ್ರಕ್ರಿಯೆಯನ್ನು ಕೈಗೊಂಡು ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹವೆ ಹೊರತು ಬೇರೆ ಯಾವುದೇ ಅಕ್ರಮ ಸಾಲದ ಮತ್ತು ಬಡ್ಡಿ ವಿಧಿಸಿದ ಸಾಲ ವಸೂಲಾತಿ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ.

ಇಂತಹ ಸಾಲವನ್ನು ವಸೂಲಿ ಮಾಡಲು ಮತ್ತು ವಿಧಿಸಿದ ಬಡ್ಡಿಯನ್ನು ಕಾನೂನಾತ್ಮಕವಾಗಿ ಕೂಡ ಲೈಸೆನ್ಸ್ ಇಲ್ಲದೇ ಮತ್ತು ನೊಂದಾಯಿತವಲ್ಲದ ಸಾಲ ನೀಡುವುದು ಮತ್ತು ಸಾಲವನ್ನು ವಸೂಲಿ ಮಾಡುವುದು ಸಂವಿಧಾನಾತ್ಮಕವಾಗಿ ಕೊಡಮಾಡಿದ ಮೂಲಭೂತ ಹಕ್ಕು ಎಂದು ಪರಿಗಣಿಸುವುದಾದರೆ ಸಂವಿಧಾನದ ಬಹುದೊಡ್ಡ ರಕ್ಷಣೆ, ಸಮಾಜದಲ್ಲಿ ಅಕ್ರಮ ಬಡ್ಡಿ ವಿಧಿಸಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ. ಇದು ಸಂವಿಧಾನ ಮತ್ತು ಕಾನೂನು ವಿರೋಧಿಯಾದ ಮತ್ತು ಸಮಾಜಕ್ಕೆ ಕಂಟಕ ತರುವಂತಹ ಸಂವಿಧಾನ ವಿರೋಧಿ ಕ್ರಮವೇ ಹೊರತು ಸಂವಿಧಾನಾತ್ಮಕವಾಗುವುದಿಲ್ಲ.

ಕಾನೂನಾತ್ಮಕವಾಗಿ ನೊಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನೈಜ ಸಾಲ ನೀಡಿದವರು ವಸೂಲಿ ಮಾಡಬಾರದೆಂದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲವೆಂದು ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸಿರುವ ಸುಗ್ರಿವಾಜ್ಞೆಯಲ್ಲಿ ಎಲ್ಲಿಯೂ ಹೇಳಿಲ್ಲ.

ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು/ನಿಷೇಧಿಸಲು ಸುಗ್ರಿವಾಜ್ಞೆ ಪ್ರಸ್ತಾಪಿಸುತ್ತದೆ.

ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆತರುವಂತಹ ಯಾವುದೇ ಕ್ರಮ ಸುಗ್ರಿವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ.

೨ ಸುಗ್ರಿವಾಜ್ಞೆಯ ಕಲಂ (೮) ಅನ್ನು ಉಲ್ಲಂಘಿಸಿದವರಿಗೆ ದಂಡನೆ ವಿಧಿಸುವ ಅಂದರೆ ೧೦ ವರ್ಷಗಳವರೆಗೆ ವಿಸ್ತರಿಸಬಹುದಾದ ಶಿಕ್ಷೆ ಮತ್ತು ೫ ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಈ ಸುಗ್ರಿವಾಜ್ಞೆಯ ಅಡಿಯಲ್ಲಿರುವ ಅಪರಾಧಗಳು ಜಾಮೀನು ರಹಿತವಾಗಿವೆ ಎಂದು ಅವಕಾಶ ಕಲ್ಪಿಸಲಾಗಿದೆ.
ಅ. ಕಿರು ಸಾಲ ಸಂಸ್ಥೆಗಳಿAದ ಗರಿಷ್ಠ ಮೊತ್ತದ ಸಾಲವೇ ಮೂರು ಲಕ್ಷವಾಗಿರುವಾಗ ಐದು ಲಕ್ಷ ರೂಪಾಯಿ ದಂಡ ವಿಧಿಸುವುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದುದ್ದು,

ಆ. ಇಂತಹ ಅಪರಾಧಗಳಿಗೆ ಬೇರೆ ಕಾನೂನುಗಳಲ್ಲಿ ಲಭ್ಯವಿರುವ ಅವಕಾಶಗಳಿಗೆ ಹೊಲಿಸಿದಾಗ ಶಿಕ್ಷೆಯ ಅವಧಿಯು ಅಳತೆಮೀರಿದ್ದು ಎಂದು ಹಾಗೂ ಇದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾದುದ್ದು. ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ದಂಡನೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ/ಒತ್ತಡ ತಂತ್ರ, ಹಿಂಸೆ, ಕಿರುಕುಳ ನೀಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ.

ಹಾಗಾಗಿ ಯಾವುದೇ ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವನ್ನು ಸರ್ಕಾರವು ಸುಗ್ರಿವಾಜ್ಞೆಯಲ್ಲಿ ಪ್ರಸ್ತಾಪಿಸಿಲ್ಲ.

ಸಾಲ ವಸೂಲಾತಿಯ ಸಂದರ್ಭದಲ್ಲಿ ಕೈಗೊಳ್ಳಬಹುದಾದ ನಿರ್ಧಿಷ್ಟ ಅಪರಾಧಗಳನ್ನು ಮಾತ್ರ ಈ ಕಾನೂನಿನ ವ್ಯಾಪ್ತಿಗೆ ತರಲಾಗಿದೆ. ಬೇರೆ ಬೇರೆ ಕಾನೂನುಗಳಲ್ಲಿ ಏನೇ ಅವಕಾಶಗಳಿದ್ದರೂ ಅಕ್ರಮ ಸಾಲ ವಸೂಲಾತಿಯ ಸಂದರ್ಭದಲ್ಲಿ ಮಾಡಲಾದ ಅಪರಾಧಗಳನ್ನು ನಿರ್ಧಿಷ್ಟಪಡಿಸುವುದು ಮತ್ತು ಅವುಗಳಿಗೆ ದಂಡನೆ ವಿಧಿಸುವುದು ಸರ್ಕಾರದ ಉದ್ದೇಶವಾಗಿದೆ.
೩ ಸಾಲ ನೀಡುವ ಸಂಸ್ಥೆಗಳು ತಾವು ನೀಡಿದ ಸಾಲಕ್ಕೆ ಯಾವುದೇ ಭದ್ರತೆ ಪಡೆಯದಂತೆ ಮತ್ತು ಈಗಾಗಲೇ ಪಡೆದಿರುವ ಭದ್ರತೆಗಳನ್ನು ಹಿಂದಿರುಗಿಸುವAತೆ ಕಾನೂನಿನಲ್ಲಿ ಅವಕಾಶ ಒದಗಿಸಲಾಗಿದೆ.

ಅ. ಈ ನಿಬಂಧನೆಯ ಸರಳವಾಗಿ ಓದಿದಾಗ ಸರ್ಕಾರಿ ಬ್ಯಾಂಕುಗಳು ಅವಲಂಭಿಸುವ ಸಾಲದ ನಿಯಮಗಳನ್ನು / ತತ್ವಗಳ ವಿರೋಧಿಯಾದ ನಿಬಂಧನೆಯಾಗಿದೇ ಎಂಬುದು ಗೊತ್ತಾಗುತ್ತದೆ. ಹಾಗೂ ಇದು ಸಾಲ ನೀಡುವ ವ್ಯವಸ್ಥೆಯ ಮೇಲೆ ದೀರ್ಘಾವಧಿ ಪರಿಣಾಮ ಉಂಟಾಗಿ ಈ ವ್ಯವಹಾರಕ್ಕೆ ಅಡೆತಡೆಯುಂಟಾಗುತ್ತದೆ. ಅದೂ ಅಲ್ಲದೇ ದೂರದ ಮತ್ತು ಬ್ಯಾಂಕಿAಗ್ ವ್ಯವಸ್ಥೆ ವಿರಳವಾಗಿ ತಲುಪುವ ಬ್ಯಾಂಕ್ ಸಾಲದ ವ್ಯವಸ್ಥೆ ತಲುಪದ ಪ್ರದೇಶಗಳ ಕಿರು ಸಾಲ ಬಯಸುವ ವ್ಯಕ್ತಿಗಳ ಅಪೇಕ್ಷೆಗಳಿಗೆ ಕೂಡ ಅಡಚಣೆಯಾಗುತ್ತದೆ. ಆದ್ದರಿಂದಾಗಿ ಸಮಾಜದಲ್ಲಿ ಸದ್ಭಾವನೆ ಮತ್ತು ಸ್ವಾಸ್ತö್ಯದ ಒಡನಾಟದ ಮೇಲೆ ಪರಿಣಾಮ ಬೀರುತ್ತದೆ.

ಆ. ಸಮಾಜದ ಕೆಳಸ್ಥರದ ವ್ಯಕ್ತಿಗಳ ಬದುಕನ್ನು ಉನ್ನತಸ್ಥರಕ್ಕೆ ಕೊಂಡೊಯ್ಯುವಲ್ಲಿ ಅತಿದೊಡ್ಡ ಪಾತ್ರ ನಿರ್ವಹಿಸುವ ಸ್ವಸಹಾಯ ಗುಂಪುಗಳ ವ್ಯಾಪಾರಿ ಭವಿಷ್ಯದ ಮೇಲೆ ಸುಗ್ರಿವಾಜ್ಞೆಯು ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಂವಿಧಾನದ ಅನುಚ್ಛೇದ (೧೯) ರ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಇದು ಸಹ ಕಾರಣವಾಗಬಹುದು. ಕಿರು ಸಾಲ ನೀಡುವ ಸಂಸ್ಥೆಗಳು ಯಾವುದೇ ಭದ್ರತೆಯನ್ನು ಪಡೆಯದೇ ಸಾಲ ನೀಡಬೇಕೆಂಬುದು ರಿಸರ್ವ ಬ್ಯಾಂಕಿನ ನಿಯಮಗಳಲ್ಲಿ ಸ್ಪಷ್ಟವಾಗಿ ವಿಧಿಸಲಾಗಿದೆ. ಆದುದರಿಂದ ಭದ್ರತೆಯನ್ನು ಪಡೆಯದೇ ಕಿರು ಸಾಲ ನೀಡಬೇಕು ಹಾಗೂ ಒಂದು ವೇಳೆ ಅಕ್ರಮವಾಗಿ ಭದ್ರತೆ ಪಡೆದಿದ್ದರೆ ಅಂತಹ ಭದ್ರತೆಗಳನ್ನು ವಾಪಸ್ಸು ನೀಡುವುದು ಕಿರು ಸಾಲ ನೀಡುವ ಸಂಸ್ಥೆಯ ಕರ್ತವ್ಯವಾಗಿದೆ.

ಕಿರು ಸಾಲ ನೀಡುವ ವ್ಯವಸ್ಥೆಯು ಬ್ಯಾಂಕಿAಗ್ ತಲುಪದ ದೂರದ ಪ್ರದೇಶಗಳಿಗಾಗಿ ರೂಪಿಸಲಾಗಿದೆ. ಕಿರು ಸಾಲ ನೀಡುವ ಮತ್ತು ಸಾಲ ನೀಡುವುದರ ಮೇಲೆ ಪರಿಣಾಮ ಬೀರುವ ಯಾವುದೇ ಅಡೆತಡೆಯನ್ನು ಈ ಸುಗ್ರಿವಾಜ್ಞೆ ಉಂಟು ಮಾಡುವುದಿಲ್ಲ.

ಸದ್ಭಾವನೆಯನ್ನು ಉಂಟು ಮಾಡುವ ವಾತಾವರಣ ಸೃಷ್ಟಿಸಬೇಕಾದ ಜವಾಬ್ದಾರಿ ಕಿರು ಸಾಲ ನೀಡುವ ಸಂಸ್ಥೆಯ ಮೇಲು ಇದೆ.

ಸ್ವಸಹಾಯ ಸಂಘಗಳ ವ್ಯಾಪಾರದ ಭವಿಷ್ಯದ ಮೇಲೆ ಸುಗ್ರಿವಾಜ್ಞೆಯ ಪರಿಣಾಮ ಇರುವುದಿಲ್ಲ ಅಥವಾ ಅದು ಶೂನ್ಯವಾಗುತ್ತದೆ. ಕೇವಲ ಸಾಲ ನೀಡಿದ ಸಂಸ್ಥೆಯ ವಸೂಲಾತಿಯ ಕಾನೂನು ಬಾಹಿರ ಕ್ರಮಗಳನ್ನು ಮಾತ್ರ ದಂಡನಿಯ ಅಪರಾಧವೆಂದು ಪರಿಗಣಿಸಲಾಗಿದೆ.

ನೊಂದಾಯಿತ ಸಂಸ್ಥೆಗಳ, ಬ್ಯಾಂಕುಗಳ ಮತ್ತು ಬ್ಯಾಂಕಿಗೇತರ ಹಣಕಾಸು ಸಂಸ್ಥೆಗಳ ಸಾಲ ನೀಡುವಿಕೆ ಮತ್ತು ವಸೂಲಾತಿ ಪ್ರಕ್ರಿಯೆಯನ್ನು ಬಗ್ಗೆ ಸುಗ್ರಿವಾಜ್ಞೆಯಲ್ಲಿ ಉಲ್ಲೇಖಿಸಿಲ್ಲ.
೪ ಮಹತ್ವದ ವಿಷಯವೆಂದರೆ ರಿಸರ್ವ ಬ್ಯಾಂಕ್‌ನೊAದಿಗೆ ನೊಂದಾಯಿತವಾದ ಯಾವುದೇ ಬ್ಯಾಂಕಿAಗ್ ಅಥವಾ ಬ್ಯಾಂಕಿAಗೇತರ ಹಣಕಾಸು ಸಂಸ್ಥೆಗಳಿಗೆ ಈ ಸುಗ್ರಿವಾಜ್ಞೆಯು ಅನ್ವಯಿಸುವುದಿಲ್ಲ. ಆದ್ದರಿಂದ ಅನೇಕ ಸಾಲ ನೀಡುವ ಸಂಸ್ಥೆಗಳು ಸುಗ್ರಿವಾಜ್ಞೆ ವ್ಯಾಪ್ತಿಯಿಂದ ಹೊರಗಿವೆ. ಈ ಸುಗ್ರಿವಾಜ್ಞೆಯು ನೊಂದಾಯಿತ ವಲ್ಲದ ಮತ್ತು ಲೈಸೆನ್ಸ್ವಿಲ್ಲದ ಸಾಲ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.

ಅ. ಇಲ್ಲಿ ಮಹತ್ವವಾಗಿ ಉಲ್ಲೇಖಿಸಬೇಕಾದದ್ದು ಎಂದರೆ ನೊಂದಾಯಿತವಲ್ಲದ ಮತ್ತು ಲೈಸೆನ್ಸ್ ರಹಿತ ಸಾಲ ನೀಡುವ ವ್ಯಕ್ತಿಗಳು ಆತ್ಮಸಾಕ್ಷಿ ಪ್ರಜ್ಞೆಯನ್ನು ಹೊಂದಿದ ನೈಜ ವ್ಯಕ್ತಿಗಳಾಗಿದ್ದು, ಪಾರಂಪರಿಕ ಪತ್ತಿನ ವ್ಯವಸ್ಥೆಯಿಂದ ನಿರ್ಲಕ್ಷಿತ ವರ್ಗಕ್ಕೆ ಅಪವಾದವೆನ್ನುವಂತೆ ಅಂದರೆ ಕೈಬಿಟ್ಟು ಹೋಗದಂತೆ ಕಾರ್ಯನಿರ್ವಹಿಸುತ್ತಾರೆ. ಸರಿಯಾದ ರೀತಿಯಲ್ಲಿ ಇಂತಹ ವ್ಯಕ್ತಿಗಳು ಬಳಕೆಯಾದಲ್ಲಿ ಪತ್ತಿನ ವ್ಯವಸ್ಥೆಗೆ ವಿಪುಲವಾದ ಅವಕಾಶ ದೊರಕುವಲ್ಲಿ ಸಹಾಯ ಮಾಡುತ್ತಾರೆ. ಹಣಕಾಸು ವಲಯದ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತದೆ.
ಆ. ನನಗೆ ಗೊತ್ತಿರುವಂತೆ, ಈ ಸಂಸ್ಥೆಗಳ ಒತ್ತಡ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಕಿರುಕುಳವನ್ನು ಪೊಲೀಸ್ ಮತ್ತು ಇತರ ಇಲಾಖಾ ಮೂಲಕ ತಡೆಯಲು ಕರ್ನಾಟಕ ಮನಿ ಲೆಂರ‍್ಸ್ ಕಾಯ್ದೆ ೧೯೬೧, ನೆಗೋಷಿಬಲ್ ಇನ್ಸೂ÷್ಟçಮೆಂಟ್ಸ್ ಕಾಯ್ದೆ ೧೮೮೧, ಕರ್ನಾಟಕ ಋಣ ಕಾಯ್ದೆ ೧೯೭೬ ಮತ್ತು ಭಾರತೀಯ ದಂಡ ಸಂಹಿತೆಯೊAದಿಗೆ ಕರ್ನಾಟಕ ಪೊಲೀಸ್ ಕಾಯ್ದೆಗಳನ್ನು ಉಪಯೋಗಿಸಲು ಅವಕಾಶವಿದೆ.

ಇ. ಇಂತಹ ಘಟನೆಗಳಿಂದ ಉಂಟಾದ ಸಮಸ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಪ್ರಸ್ತುತ ಲಭ್ಯವಿರುವ ಕಾಯ್ದೆಯ ಅವಕಾಶಗಳನ್ನು ಅನುಷ್ಠಾನಗೊಳಿಸುವಲ್ಲಿ ಕೊರತೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿಯ ಶೂನ್ಯಗಳು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ಕಾಣುತ್ತದೆ. ಲಭ್ಯವಿರುವ ಕಾನೂನಿನ ನಿಬಂಧನೆಗಳನ್ನು ದಕ್ಷತೆಯಿಂದ ಅನುಷ್ಠಾನಗೊಳಿಸುವ ಆಡಳಿತಾತ್ಮಕ ಯಂತ್ರಗಳ ಮೂಲಕ ಇಂತಹ ಸಮಸ್ಯೆಗಳನ್ನು ದಕ್ಷತೆಯಿಂದ ನಿಯಂತ್ರಿಸಬಹುದಾಗಿದೆ.

ಈ. ಬೇರೆ ಬೇರೆ ಕಾನೂನುಗಳಲ್ಲಿ ಇಂತಹ ಅಪರಾಧಗಳಿಗೆ ನಿಬಂಧನೆಗಳು ಇಲ್ಲದೇ ಇದ್ದರೇ ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಈ ಸುಗ್ರಿವಾಜ್ಞೆಯನ್ನು ಜಾರಿಗೆ ತರುವುದು ಅಗತ್ಯವಾಗುತ್ತದೆ. ಆದರೆ, ಬೇರೆ ಬೇರೆ ಕಾನೂನುಗಳಲ್ಲಿ ಪರಿಹಾರಗಳು ಲಭ್ಯವಿರುವಾಗ ಲಭ್ಯವಿರುವ ನಿಬಂಧನೆಗಳನ್ನು ಜಾರಿಗೆ ಕೊಡುವ ಮೂಲಕ ಸಾಲ ಪಡೆದವರನ್ನು ಕಾನೂನು ಬಾಹಿರ ಕಿರುಕುಳ ಮತ್ತು ಹಿಂಸೆಯಿAದ ಮತ್ತು ರಿಸರ್ವ ಬ್ಯಾಂಕಿನ್ ಮಾರ್ಗದರ್ಶಿ ಸೂತ್ರಗಳ ಮೂಲಕ ರಕ್ಷಿಸಬಹುದಾಗಿದೆ. ರಿಸರ್ವ ಬ್ಯಾಂಕಿನ ನಿಬಂಧನೆಗಳು ಲಭ್ಯವಿರುವಾಗ ನೊಂದಾಯಿತ ಸಂಸ್ಥೆಗಳಿಗೆ ಈ ಸುಗ್ರಿವಾಜ್ಞೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಕಾನೂನಾತ್ಮಕ ಕ್ರಮವಾಗಿದೆ.

ನಿರ್ಲಕ್ಷಿತ ವರ್ಗವನ್ನು ಹಣಕಾಸು ಅಭಿವೃದ್ಧಿಗಳಿಗೆ ಸೇರ್ಪಡೆಗೊಳಿಸಲು ಸುಗ್ರಿವಾಜ್ಞೆ ಯಾವುದೇ ರೀತಿಯ ವಿರೋಧಿ ಕ್ರಮ ಕೈಗೊಳ್ಳುವುದಿಲ್ಲ.

ಸಾಲ ನೀಡಿದ ವ್ಯಕ್ತಿ ವಸೂಲಾತಿಗೆ ಕಾನೂನಿಗೆ ಗೊತ್ತಿರುವ ಮಾರ್ಗವನ್ನು ಮಾತ್ರ ಅನುಸರಿಸಬೇಕೆಂದು ನಿಬಂಧನೆ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಎಲ್ಲಾ ಕಾಯ್ದೆಗಳಲ್ಲಿ ಯಾವುದೇ ಗಂಭೀರ ಮತ್ತು ನಿಯಂತ್ರಣ ಮಾಡುವ ಪರಿಣಾಮಕಾರಿಯಾದ ಅಸ್ತç ಇಲ್ಲದೇ ಇದ್ದಿದರಿಂದ ಸಮಾಜದ ಕೆಳಸ್ತರದ ವ್ಯಕ್ತಿಗಳಿಗೆ ಮತ್ತು ಅಬಲರಿಗೆ ಸಬಲವಾದ ಅಸ್ತçವನ್ನು ಕಾನೂನಾತ್ಮಕವಾಗಿ ಒದಗಿಸಬೇಕೆಂಬ ಘನವಾದ ಉದ್ದೇಶ ಸರ್ಕಾರಕ್ಕಿದೆ.

ಈಗಿರುವ ಪರಿಹಾರಗಳು ಕಠಿಣಾತಿ ಕಠಿಣ ಕ್ರಮಗಳ ಬಗ್ಗೆ ಮತ್ತು ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಪ್ರಸ್ತುತ ಕಾಯ್ದೆಗಳಲ್ಲಿ ವಿಪುಲವಾದ ಅವಕಾಶವಿಲ್ಲ. ರಿಸರ್ವ ಬ್ಯಾಂಕಿನ ಮಾರ್ಗದರ್ಶಿಗಳು ನೊಂದಾವಣಾ ನಿಬಂಧನೆಗಳು ಕೇವಲ ನೊಂದಾಯಿತ ಸಂಸ್ಥೆಗಳಿಗೆ ಮಾತ್ರ ಇಂತಹ ನಿಬಂಧನೆಗಳು ಅನ್ವಯವಾಗುತ್ತವೆ. ಬೇರೆ ಬೇರೆ ಕಾನೂನುಗಳು ನಿರ್ಧಿಷ್ಟವಾದ ಅಪರಾಧಗಳನ್ನು ನಿರ್ಧಿಷ್ಟವಾಗಿ ದಂಡಿಸುವ ಅವಕಾಶವಿರುವುದಿಲ್ಲ.
೫ ಇಂತಹ ಘಟನೆಗಳನ್ನು ತಡೆಯುವಲ್ಲಿ ಸುಗ್ರಿವಾಜ್ಞೆಯು ಹೇಗೆ ಅನುಕೂಲವಾಗುತ್ತಿದೆ ಎಂಬುದರ ಬಗ್ಗೆ ಅಂಕಿ-ಸAಖ್ಯೆಗಳೊAದಿಗೆ ವಿವರಣೆ ಅಥವಾ ಕಾನೂನು ಸಲಹೆ ಮೂಲಕ ಯಾವುದೇ ರೀತಿಯ ಶಿಫಾರಸ್ಸು ಸಲಹೆ ಕಡತದಲ್ಲಿ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಸರ್ಕಾರವು ಲಭ್ಯವಿರುವ ಎಲ್ಲಾ ಸ್ಥರದಲ್ಲಿ ಸಮಾಲೋಚನೆಗಳನ್ನು ಹಲವಾರು ಸುತ್ತಿನಲ್ಲಿ ಕೈಗೊಂಡು ಈ ಸುಗ್ರಿವಾಜ್ಞೆಯ ಕರಡನ್ನು ಸಿದ್ಧಪಡಿಸಿದೆ. ಸರ್ಕಾರದ ಮುಖ್ಯಮಂತ್ರಿಯವರೆಗಿನ ಎಲ್ಲಾ ಹಂತಗಳಲ್ಲೂ ಸಮಾಲೋಚನೆಗಳನ್ನು ವಿಸ್ತೃತವಾಗಿ ಕೈಗೊಳ್ಳಲಾಗಿದೆ.
೬ ಹೆಚ್ಚಿನ ಅಂಶವೆAದರೇ ಈ ಸುಗ್ರಿವಾಜ್ಞೆಯು ಸಮಾಜದಲ್ಲಿ ಸಾಲ ಪಡೆದವರ ವರ್ಗಕ್ಕೆ ನೆರವಾಗುತ್ತದೆ. ಅದೇ ಸಮಾಜದ ಭಾಗವಾಗಿರುವ ಸಾಲ ನೀಡುವವರ ಹಿತಾಸಕ್ತಿಗೆ ಬಾಧಿತವಾಗುತ್ತದೆ. ಆದ್ದರಿಂದ ಈ ವಿಷಯವು ವಿಧಾನಮಂಡಲದಲ್ಲಿ ವ್ಯಾಪಕವಾಗಿ ಚರ್ಚಿಸುವುದು ಅಗತ್ಯವಾಗಿದೆ.

ಅ. ಮುಂದಿನ ಮಾರ್ಚ ತಿಂಗಳಿನಲ್ಲಿ ಮುಂಗಡ ಪತ್ರ ಅಧಿವೇಶನವು ಪ್ರಾರಂಭವಾಗವುದರಿAದ ಅವಸರದಲ್ಲಿ ಸುಗ್ರಿವಾಜ್ಞೆ ತರುವ ಬದಲು ವಿಸ್ತೃತ ಚರ್ಚೆಯ ನಂತರ ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿಯಾದ ಶಾಸನವನ್ನು ರೂಪಿಸುವುದು ಸೂಕ್ತವೆಂದು ಅಭಿಪ್ರಾಯಿಸಲಾಗಿದೆ.

ಆದ್ದರಿಂದ ನನ್ನ ಮೇಲ್ಕಂಡ ಅಂಶಗಳನ್ನು ಮತ್ತು ಸಲಹೆಗಳೊಂದಿಗೆ ಸ್ಪಷ್ಠಿಕರಣಗಳೊಂದಿಗೆ ಕಡತವನ್ನು ಮರುಸಲ್ಲಿಸಬೇಕೆಂಬ ನಿರ್ದೇಶನದೊಂದಿಗೆ ರಾಜ್ಯ ಸರ್ಕಾರಕ್ಕೆ ಸುಗ್ರಿವಾಜ್ಞೆ ಮರಳಿಸಿದೆ. ಸಾಲ ನೀಡುವವರ ಹಿತಗಳನ್ನು ನಿಯಮಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಸಾಲ ವಸೂಲಾತಿಯನ್ನು ನಿಷೇಧಿಸಿಲ್ಲ. ನಿಷೇಧಿತ ಚಟುವಟಿಕೆಗಳ ಮೂಲಕ ಸಾಲ ವಸೂಲಾತಿಯನ್ನು ತಡೆಯಲು ತುರ್ತಾಗಿ ಸುಗ್ರಿವಾಜ್ಞೆ ಅಂತಿಮಗೊಳಿಸಿದೆ. ಈ ಸುಗ್ರಿವಾಜ್ಞೆಯು ಮಸೂದೆಯಾಗಿ ವಿಧಾನಮಂಡಲದಲ್ಲಿ ಚರ್ಚೆಗೆ ಸಹಜವಾಗಿ ಮಂಡಿಸಲಾಗುತ್ತದೆ. ಆ ಸಂದರ್ಭದಲ್ಲಿ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ.

ಸರ್ಕಾರವು ತುರ್ತು ಸಂದರ್ಭಗಳಲ್ಲಿ ಸುಗ್ರಿವಾಜ್ಞೆಯ ಮೂಲಕ ಜನರ ನೆರವಿಗೆ ಬರಬೇಕಾದ ಸಂವಿಧಾನದತ್ತ ಅವಕಾಶ ಲಭ್ಯವಿರುವುದರಿಂದ ಅಂತಹ ಅವಕಾಶವನ್ನು ಬಳಕೆ ಮಾಡಿಕೊಂಡು ಈ ಸುಗ್ರಿವಾಜ್ಞೆ ಜಾರಿಗೆ ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ಸುಗ್ರಿವಾಜ್ಞೆ/ ಕಾನೂನು ರಚಿಸಲು ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದೆ.

ಈ ಕಾಯ್ದೆಯನ್ನು/ ಸುಗ್ರಿವಾಜ್ಞೆಯನ್ನು ಜಾರಿಗೆ ಕೊಡಲು ಸರ್ಕಾರವು ಸಂವಿಧಾನದ ಅನುಚ್ಛೇದ ೨೧೩, ಎಂಟ್ರಿ ೩೦ ಆಫ್ ಲಿಸ್ಟ್-೨ (೭ನೇ ಅನುಸೂಚಿ) ಯಲ್ಲಿ ತನ್ನ ಪರಮಾಧಿಕಾರ ವ್ಯಾಪ್ತಿಯನ್ನು ನಿರ್ವಹಿಸಿದೆ ಎಂಬ ಅಂಶವನ್ನು ಗಮನಕ್ಕೆ ತರಲಾಗುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button