Film & EntertainmentKarnataka News

*ಹೃದಯಾಘಾತದಿಂದ ನಟ ಗಿರಿ ದಿನೇಶ್ ನಿಧನ*

ಪ್ರಗತಿವಾಹಿನಿ ಸುದ್ದಿ : ದರ್ಶನ್ ನಾಯಕತ್ವದಲ್ಲಿ ಮೂಡಿಬಂದ ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಅಭಿನಯಿಸಿದ್ದ ಗಿರಿ ದಿನೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಫೆಬ್ರವರಿ 7ರ ಸಂಜೆ ತಮ್ಮ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರ ಕುಟುಂಬಸ್ಥರು ಅವರನ್ನ ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ, ಮಾರ್ಗ ಮಧ್ಯೆಯೇ ಗಿರಿ ದಿನೇಶ್ ಮೃತಪಟ್ಟಿದ್ದಾರೆ.

45 ವರ್ಷದ ಗಿರಿ ದಿನೇಶ್‌ಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ತಿಳಿದು ಬಂದಿದೆ.

ಅವಿವಾಹಿತಾರಾಗಿದ್ದ ಗಿರಿ ಅಣ್ಣನ ಮನೆಯಲ್ಲಿಯೇ ವಾಸವಿದ್ದರು ‘ನವಗ್ರಹ’ ರೀ ರಿಲೀಸ್ ಸಂದರ್ಭದಲ್ಲಿ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಗಿರಿ ದಿನೇಶ್ ಭಾಗವಹಿಸಿರಲಿಲ್ಲ.

Home add -Advt

ನವಗ್ರಹ, ಚಮಕಾಯ್ಸಿ ಚಿಂದಿ ಉಡಾಯಿಸಿ ಸಿನಿಮಾ ಸೇರಿದಂತೆ 4 ಚಿತ್ರಗಳಲ್ಲಿ ನಟಿಸಿದ್ದ ಗಿರಿ ಸಿನಿಮಾ ರಂಗದಲ್ಲಿ ಯಶಸ್ಸು ಕಂಡಿರಲಿಲ್ಲ.

Related Articles

Back to top button