![](https://pragativahini.com/wp-content/uploads/2024/10/shettar-.jpg)
ಪ್ರಗತಿವಾಹಿನಿ ಸುದ್ದಿ: ದೆಹಲಿ ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಆಪ್ ಅಧಿಕಾರಕ್ಕೇರುವ ಆಸೆಗೆ ತಣ್ಣೀರು ಬಿದ್ದಿದೆ. ಬಿಜೆಪಿ ಗೆಲುವಿನ ನಗೆ ಬೀರಿದ್ದು ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತಾಡಿದ ಜಗದೀಶ್ ಶೆಟ್ಟರ್, ದೆಹಲಿ ಜನ ಬಿಜೆಪಿಗೆ ಆಶೀರ್ವಾದ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೆ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ನೆಚ್ಚಿಕೊಂಡಿರುತ್ತದೆಯೋ, ಅಲ್ಲಿಯವರೆಗೆ ಆ ಪಕ್ಷ ಉದ್ಧಾರವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮ ಪಕ್ಷ ದಿಂದ ರೋಸಿ ಹೋಗಿದ್ದರು. ಕೇವಲ ಬಾಯಿ ಮಾತಿನಲ್ಲಿ ತಮ್ಮದು ವಿನೂತನ ರಾಜಕಾರಣ ಎಂದು ಹೇಳುತ್ತಿದ್ದ ಆಪ್ ನಾಯಕರು, ಲಿಕ್ಕರ್ ಹಗರಣ, ಅರಮನೆಯಂತಹ ಮನೆ ನಿರ್ಮಿಸಿಕೊಳ್ಳುವುದಲ್ಲಿ ನಿರತರಾಗಿದ್ದರು. ಭ್ರಷ್ಟಾಚಾರದಿಂದ ಬೇಸತ್ತಿದ್ದ ಮತದಾರರು ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ