![](https://pragativahini.com/wp-content/uploads/2025/02/IMG_20250208_195337_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 27 ವರ್ಷಗಳ ಬಳಿಕ ದೆಹಲಿಯ ಗದ್ದುಗೆ ಬಿಜೆಪಿ ಪಾಲಾಗಿದ್ದು, ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಬಿಜೆಪಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಗಿದ್ದು, ಪಟಾಕಿ ಸಿಡಿಸಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅಭಯ ಪಾಟೀಲ್ ಅವರು, ದೆಹಲಿಯಲ್ಲಿದ್ದ ಭ್ರಷ್ಟ, ಸುಳ್ಳು ದೇಶದ್ರೋಹಿ ಸರ್ಕಾರ ಅಂತ್ಯವಾಗಿದೆ. ಆಪ್ ಅಂದ್ರೆ ಪಾಪದ ಸರ್ಕಾರ, ಇಂಥ ಸರ್ಕಾರವನ್ನು ದೆಹಲಿ ಜನ ತೊಳೆದುಹಾಕಿದ್ದಾರೆ. ಅತಿಹೆಚ್ಚು ಉಚಿತ ಸ್ಕೀಮ್ ಕೊಟ್ಟ ಆಪ್ ಸರ್ಕಾರ ಅಲ್ಲಿನ ಜನರಿಂದ ತಿರಸ್ಕಾರವಾಗಿದೆ. ಪಂಜಾಬ್ ಆಪ್ ಸರ್ಕಾರವೂ ಆಂತರಿಕ ಕಚ್ಚಾಟದಿಂದ ಪತನವಾಗಲಿದೆ. ದೇಶದ ರಾಜಧಾನಿಯಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನ ಬಂದಿಲ್ಲ. ಅಣ್ಣಾ-ತಂಗಿ ಪ್ರಚಾರ ಮಾಡಿದ್ರೂ ಒಂದು ಸ್ಥಾನ ಬಂದಿಲ್ಲ, ಇವರ ಕ್ರೆಡಿಬಿಲಿಟಿ ನೋಡಿ ಎಂದು ಅಭಯ ಪಾಟೀಲ್ ಲೇವಡಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ