![](https://pragativahini.com/wp-content/uploads/2025/02/IMG_20250212_203835_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟಿಸಲಾಗಿದೆ.
ಬೆಳಗಾವಿ ತಾಲೂಕಾ ಪಂಚಾಯತಿ ಮುಂದೆ ಕರವೇ ಶಿವರಾಮೇಗೌಡ ಜಿಲ್ಲಾ ಅಧ್ಯಕ್ಷ ವಾಜೀದ ಹಿರೇಕೂಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಲೇಔಟ್ ಗಳ ನಿರ್ಮಾಣ ಮಾಡಿ, ಪಂಚಾಯತಿ ಸದಸ್ಯರು ಮತ್ತು ಪಿಡಿಓ ಅಕ್ರಮವಾಗಿ ಉತ್ತರ ನೀಡಿದ್ದಾರೆ ಯಾವುದೇ ಠರಾವು ಪಾಸು ಮಾಡದೆ ದಾಖಲೆ ನೀಡುತ್ತಿದ್ದಾರೆ. ಕಾನೂನು ಬಾಹಿರ ಕೆಲಸ ಮಾಡಿದ ಅಧಿಕಾರಿಗಳ ಮೇಲೆ ಕಾನುನೂ ಕ್ರಮಕ್ಕೆ ಆಗ್ರಹಿಸಿದ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು.
ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ