![](https://pragativahini.com/wp-content/uploads/2023/07/metro-.jpg)
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಭಾರಿ ಏರಿಕೆಗೆ ಜನಾಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ದರ ಪರಿಷ್ಕರಣೆಗೆ ಸೂಚಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬಿಎಂಆರ್ ಸಿ ಎಲ್ ಎಂಡಿ ಮಹೇಶ್ವರ್ ರಾವ್ ಮೆಟ್ರೋ ದರದಲ್ಲಿ ಕೆಲ ಬದಲಾವಣೆ ಬಗ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಂಆರ್ ಸಿ ಎಲ್ ಎಂಡಿ ಮಹೇಶ್ವರ್ ರಾವ್, ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಇಲ್ಲ. ಆದರೆ ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡಲಾಗುವುದು ಎಂದರು.
ಆರಂಭದ ದರ ಏರಿಕೆ ಹಾಗೆಯೇ ಇರಲಿದೆ. ಕೆಲವೆಡೆ 90, 100ರಷ್ಟು ಎಲ್ಲೆಲ್ಲಿ ದರ ಏರಿಕೆಯಾಗಿದೆ ಅಲ್ಲಲ್ಲಿ ದರ ಇಳಿಸಲಾಗುವುದು. ಆಯಾ ಸ್ಟೇಜ್ ಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ದರ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ