
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕಾರಂಜಿಮಠದ ೧೯ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ನವೆಂಬರ್ 6 ರಂದು ಸಾಯಂಕಾಲ 6 ಗಂಟೆಗೆ ಪ್ರಕಾಶ ಗಿರಿಮಲ್ಲನವರ ಬರೆದ ಕಾರುಣ್ಯದ ಕಾರಂಜಿ ಪುಸ್ತಕ ಬಿಡುಗಡೆಯಾಗಲಿದೆ.
 ನಿಡಸೋಸಿ ಸಿದ್ದಸಂಸ್ಥಾನ ಮಠದ  ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಪುಸ್ತಕ ಬಿಡುಗಡೆ ಮಾಡುವರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಹತ್ತರಗಿ ಕಾರೀಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ನೇತೃತ್ವ ಮತ್ತು ಮಹಾಂತ ದೇವರು, ಶಿವಯೋಗಿ ದೇವರು ಸಮ್ಮುಖ ವಹಿಸುವರು.
 ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ ಅತಿಥಿಗಳಾಗಿ ಆಗಮಿಸುವರು.
  ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು ಜೀವನ ದರ್ಶನ ಪ್ರವಚನ ನೀಡುವರು.
				
				
					 
					 
				 
					 
					 
					 
					
 
					


