
ಪ್ರಗತಿವಾಹಿನಿ ಸುದ್ದಿ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೈದ್ಯೆ ನೀರುಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ.
ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಹಾಗೂ ಆಕೆಯ ಸ್ನೇಹಿತರು ಗಂಗಾವತಿ ಬಳಿಯ ಸಾಣಾಪುರದ ಪ್ರವಾಸಿ ತಾಣಕ್ಕೆ ಬಂದಿದ್ದರು. ಹೀಗೆ ಬಂದ ವೈದ್ಯೆ ತುಂಗಭದ್ರಾ ನದಿಗೆ ಈಜಲೆಂದು ಜಿಗಿದ್ದಿದ್ದಾಳೆ. ತಾನು ಮೇಲಿನಿಂದ ಜಿಗಿದು ಈಜಾಡುವ ದೃಶ್ಯವನ್ನು ವಿಡಿಯೋ ಮಾಡುವಂತೆ ಸ್ನೇಹಿತರಿಗೆ ಹೇಳಿದ್ದಳು. ಮೊಬೈಲ್ ನಲ್ಲಿ ಸ್ನೇಹಿತೆಯರು ವಿಡಿಯೋ ಮಾಡುತ್ತಿದ್ದ ವೇಳೆ ವೈದ್ಯೆ ಕಲ್ಲಿನ ಮೇಲೆ ನಿಂತು 20 ಅಡಿ ಮೇಲಿನಿಂದ ನದಿಗೆ ಜಿಗಿದ್ದಾಳೆ. ಹೀಗೆ ಜಿಗಿದ ವೈದ್ಯೆ ಕೆಲಕಾಲ ಈಜುತ್ತಲೇ ನೀರಿನ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾಳೆ.
ಅನನ್ಯಾ ರಾವ್ ನೀರುಪಾಲಾಗಿರುವ ವೈದ್ಯೆ. ಘಟನಾ ಸ್ಥಳಕ್ಕೆ ಗಂಗಾವತಿ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವೈದ್ಯೆಗಾಗಿ ನೀರಿನಲ್ಲಿ ಶೋಧ ಕಾರ್ಯನಡೆಸಿದ್ದಾರೆ.