
ಪ್ರಗತಿವಾಹಿನಿ ಸುದ್ದಿ: ನಾಡಬಾಂಬ್ ಸ್ಫೋಟಗೊಂದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯ ಬೆಟ್ಟದಲ್ಲಿ ನಡೆದಿದೆ.
ಜೈನ ಬಸಿದಿ ಶಾಲೆಯ ಹರಿಯಂತ್ ಪಾಟೀಲ್, ಪಾರ್ಥ ಗಾಯಾಳು ವಿದ್ಯಾರ್ಥಿಗಳು. ಬೆತ್ಟದ ಮೇಲಿನ ದೇವಸ್ಥಾನಕ್ಕೆ ಸ್ವಚ್ಚತಾ ಕಾರ್ಯಕ್ಕೆ ಹೋಗಿದ್ದ ವೇಳೆ ಸ್ವಚ್ಚತೆ ಮಾಡುತ್ತಿದ್ದಾಗ ಕಸದ ರಾಶಿಗೆ ವಿದ್ಯಾರ್ಥಿಗಳು ಕೈ ಇಡುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಓರ್ವನ ಅಂಗೈ ಛಿದ್ರಗೊಂಡಿದೆ. ಮತ್ತೋರ್ವನ ಮುಖಕ್ಕೆ ಗಾಯಗಳಾಗಿವೆ. ಕಾಡುಹಂದಿ ಬೇಟೆಗೆಂದು ಇಟ್ಟಿದ್ದ ನಾಡಬಾಂಬ್ ಎಂದು ಶಂಕಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ