NationalPolitics

*ಕಲಾಪದಲ್ಲಿ ಕೋಲಾಹಲ: 12 ಎಎಪಿ ಶಾಸಕರು ಅಮಾನತು*

ಪ್ರಗತಿವಾಹಿನಿ ಸುದ್ದಿ: 27 ವರ್ಷಗಳ ಬಳಿಕ ದೆಹಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮೊದಲ ಅಧಿವೇಶನ ನಡೆಸಿದೆ. ಇದೆ ವೇಳೆ ಭಾರೀ ಕೋಲಾಹಲವೇ ನಡೆದ ಹಿನ್ನೆಲೆಯಲ್ಲಿ, ಸ್ಪೀಕ‌ರ್ ವಿಜೇಂದರ್ ಗುಪ್ತಾ ಅವರು 12 ಜನ ಎಎಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. 

ಇಂದು ಸದನದಲ್ಲಿ ಎಲ್-ಜಿ ವಿಕೆ ಸಕ್ಷೇನಾ ಅವರ ಭಾಷಣದ ವೇಳೆ ಘೋಷಣೆಗಳನ್ನು ಕೂಗಿದ್ದಕ್ಕೆ ಆಮ್ ಆದಿ ಪಕ್ಷದ 12 ಶಾಸಕರನ್ನು ಒಂದು ದಿನದ ಮಟ್ಟಿಗೆ ಸಭೆಯಿಂದ ಉಚ್ಛಾಟಿಸಿದ್ದಾರೆ. ಪ್ರತಿಪಕ್ಷದ ನಾಯಕಿ ಅತಿಶಿ, ಮಾಜಿ ಸಚಿವ ಗೋಪಾಲ್ ರೈ ಸೇರಿದಂತೆ 12 ಶಾಸಕರು ಅಮಾನತುಗೊಂಡಿದ್ದಾರೆ.

ಎಎಪಿ ಅಧಿಕಾರಾವಧಿಯ ಮದ್ಯನೀತಿ, ದೆಹಲಿಯ ಸಾರ್ವಜನಿಕ ಸಾರಿಗೆ ಮತ್ತು ಆರೋಗ್ಯ ಸೇವೆಗಳ ಲೆಕ್ಕ ಪರಿಶೋಧನೆ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಗಳನ್ನು ಸದನದಲ್ಲಿ ಮಂಡಿಸಲಿದ್ದು ಇದಕ್ಕೂ ಮುನ್ನ ಲೆಫ್ಟಿನೆಂಟ್ ಗವರ್ನರ್ ಭಾಷಣ ಮಾಡಲು ಮುಂದಾದಾಗ ಎಎಪಿ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು.

70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 48 ಶಾಸಕರನ್ನು ಹೊಂದಿದ್ದು ಆಡಳಿತದ ಚಿಕ್ಕಾಣಿ ಹಿಡಿದಿದ್ದರೆ, ಎಎಪಿ 22 ಶಾಸಕರನ್ನು ಹೊಂದಿದ್ದು ವಿಪಕ್ಷ ಸ್ಥಾನದಲ್ಲಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button