
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2023-24ನೇ ಸಾಲಿನ ಯಂತ್ರಚಾಲಿತ ದ್ವಿಚಕ್ರ ಯೋಜನೆಯಡಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೈಹಿಕ ವಿಕಲಚೇತನರಿಗೆ 20 ದ್ವಿಚಕ್ರ ವಾಹನಗಳನ್ನು ಗೋಕಾಕ ಗೃಹಕಚೇರಿಯಲ್ಲಿ ಮಂಗಳವಾರ (ಫೆ.25) ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ವಾಹನಗಳನ್ನು ಬೇರೆಯವರಿಗೆ ಹಸ್ತಾಂತರಿಸದೇ ಅಥವಾ ವರ್ಗಾವಣೆ ಮಾಡದೇ ಸ್ವಂತಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದುವರೆಗೆ ಒಟ್ಟು 147 ವಾಹನಗಳು ಯಮಕನಮರಡಿ ಕ್ಷೇತ್ರದ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಇನ್ನೂ 35 ವಾಹನಗಳನ್ನು ಮಾರ್ಚ ಅಂತ್ಯದವರೆಗೆ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಶ್ರೀ ರಾಹುಲ ಜಾರಕಿಹೊಳಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಮದೇವ್ ಬಿಲ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ