
ಪ್ರಗತಿವಾಹಿನಿ ಸುದ್ದಿ: ಇಡ್ಲಿ ಬಳಿಕ ಇದೀಗ ಹಸಿರು ಬಟಾಣಿಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದೆ. ಹಸಿರು ಬಟಾನಿಗಳಿಗೆ ಬಣ್ಣಗಳನ್ನು ಬಳಸುವುದರಿಂದ ಇವುಗಳು ಅಸುರಕ್ಷಿತವಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆ 36 ಮಾದರಿಗಳನ್ನು ಪರೀಕ್ಷಿಸಿದ್ದು, ಇವುಗಳಲ್ಲಿ 28ಕ್ಕೂ ಹೆಚ್ಚು ಮಾದರಿಗಳು ಅಸುರಕ್ಷಿತವಾಗಿವೆ. ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂಬುದನ್ನು ಪತ್ತೆ ಮಾಡಿದೆ.
ಬಟಾಣಿ ಹಸಿರಾಗಿ ಕಾಣಲು ಕೃತಕ ಬಣ್ಣ ಬಳಸಲಾಗುತ್ತಿದೆ. ಇದರಿಂದ ಸಾಮಾನ್ಯಕ್ಕಿಂತ ಹೆಚ್ಚು ಹಸಿರು ಬಣ್ಣ ಬಟಾಣಿಗಳಲ್ಲಿ ಕಂಡುಬರುತ್ತವೆ. ಇದನ್ನು ನೋಡಿ ಜನರು ಆಕರ್ಷಿತರಾಗಿ ಹಸಿರು ಬಟಾಣಿ ಕೊಳ್ಳುತ್ತಾರೆ. ಈ ಬಟಾಣಿಗಳನ್ನು ನೀರಿನಲ್ಲಿ ನೆನೆಹಾಕಿದರೆ ಅಥವಾ ತೊಳೆದರೆ ಹಸಿರು ಬಣ್ಣ ಬಿಟ್ಟುಕೊಳ್ಳುತ್ತದೆ. ಇಂತಹ ಬಟಾಣಿಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಚಿತ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ಮಾರಾಟ ಮಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ