ಪ್ರಗತಿವಾಹಿನಿ ಸುದ್ದಿ, ಧಾರವಾಡ:
ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಕುಮಾರೇಶ್ವರ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿದಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಹಲವರು ಅಡಿಗೆ ಸಿಲುಕಿರುವ ಶಂಕೆ ಇದೆ.
ನಿರ್ಮಾಣ ಹಂತದಲ್ಲಿರುವ ಈ ವಾಣಿಜ್ಯ ಸಂಕಿರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು.
ಪ್ರಭಾವಿಯೊಬ್ಬರಿಗೆ ಸೇರಿದ ಕಟ್ಟಡ ಇದೆನ್ನಲಾಗಿದ್ದು, ಜಿಲ್ಲಾಧಿಕಾರಿ ದೀಪ ಚೋಳನ್ ಸ್ಥಳದಲ್ಲಿ ನಿಂತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
10ಕ್ಕೂ ಹೆಚ್ಚು ಅಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿವೆ.
ಸ್ಥಳೀಯರು ಹಾಗೂ ಪೊಲೀಸರು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಕಟ್ಟಡ ಕಾಮಗಾರಿ ನಡೆಯುತ್ತಿದ್ದಾಗಲೆ ಕೆಳ ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ನೀಡಲಾಗಿದೆ.