Kannada NewsKarnataka NewsLatest

*ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ DC, ಇನ್ಸ್ ಪೆಕ್ಟರ್, ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಲಂಚಕ್ಕೆ ಕೈಯೊಡ್ಡಿದ್ದಾಗಲೇ ಅಬಕಾರಿ ಅಧಿಕಾರಿಗಳ ಏಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅಬಕಾರಿ ಡಿಸಿ, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಲೋಕಾ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮದ್ಯದಂಗಡಿಗೆ ಪರವಾನಿಗೆ ನೀಡಲು ಲಂಚ ಸ್ವೀಕರಿಸುತ್ತಿದ್ದ ದಾವಣಗೆರೆ ಅಬಕಾರಿ ಡಿಸಿ ಸ್ವಪ್ನಾ, ಹರಿಹರ ಅಬಕಾರಿ ಇನ್ಸ್ ಪೆಕ್ಟರ್ ಶೀಲಾ, ಕಚೇರಿ ಸಿಬ್ಬಂದಿಗಳಾದ ಹೆಚ್.ಎಂ ಅಶೋಕ್, ಶ್ರೀಶೈಲಾ ಲೋಕಾಯುಕ್ತ ಬಲೆಗೆ ಬಿದ್ದವರು.

Home add -Advt

ಮದ್ಯದಂಗಡಿಗೆ ಪರವಾನಗಿ ನೀಡಲು ಹರಿಹರ ಮೂಲದ ರಂಗನಾಥ್ ಎಂಬುವವರಿಂದ ಸಿಬ್ಬದಿ ಅಶೋಕ್ ಮೂಲಕ ಅಬಕಾರಿ ಡಿಸಿ ಸ್ವಪ್ನಾ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಬಕಾರಿ ಡಿಸಿ, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.


Related Articles

Back to top button