
ಪ್ರಗತಿವಾಹಿನಿ ಸುದ್ದಿ: ಕ್ರಿಪ್ಟೋ ಕರೆನ್ಸಿ ಹೆಸರಿನ ಕಂಪನಿಯೊಂದರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ತಮನ್ನಾ ಭಾಟಿಯಾ ಹಾಗೂ ಕಾಜಲ್ ಅಗರ್ವಾಲ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
2020ರಲ್ಲಿ ಕೋಯಮತ್ತೂರ್ ನಲ್ಲಿ ಸ್ಥಾಪಿಸಲಾಗಿದ್ದ ಕ್ರಿಪ್ತೋ ಕರೆನ್ಸಿ ಕಂಪನಿ ಉದ್ಘಾಟನಾ ಕಾರ್ಯಕ್ರಮಕ್ಕೆ ನಟಿ ತಮನ್ನಾ ಭಾಟಿಯಾ ಹೋಗಿದ್ದರು. ಬಳಿಕ ಮಹಾಬಲಿಪುರಂ ನಲ್ಲಿ ನಡೆದ ಕಂಪನಿಯ ವಾರ್ಶ್ಷಿಕೋತ್ಸವ ಕಾರ್ಯಕ್ರಮಕ್ಕೆ ನಟಿ ಕಾಜಲ್ ಅಗರ್ವಾಲ್ ಅತಿಥಿಯಾಗಿ ಹೋಗಿದ್ದರು. ಇದೇ ಈಗ ಇಬ್ಬರು ನಟಿಯರಿಗೆಸಂಕಷ್ಟ ತಂದೊಡ್ಡಿದೆ.
ಕ್ರಿಪ್ಟ್ ಕರೆನ್ಸಿ ಕಂಪನಿಯಿಂದ 2.40 ಕೋಟಿ ವಂಚನೆಯಾಗಿದೆ ಎಂದು ಹೂಡಿಕೆದಾರರು ಪದುಚೆರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮನ್ನಾ ಹಾಗೂ ಕಾಜಲ್ ವಿರುದ್ಧವೂ ದೂರು ನೀಡಲಾಗಿದೆ. ನಿವೃತ್ತ ನೌಕರ ಅಶೋಕ್ ಎಂಬುವವರು ಕ್ರಿಸ್ಟೋ ಕರೆನ್ಸಿ ಕಂಪನಿ ತಮ್ಮ ಹಾಗೂ ತಮ್ಮ ಹತ್ತಿರದವರಾದ 10 ಜನರಿಂದ ಹಣ ತೊಡಗಿಸಿಕೊಂಡು ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಮೋಸ ಮಾಡಿದೆ. ಸುಮಾರು 2.40 ಕೋಟಿ ರೂಪಾಯಿ ಮೋಸವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಕಂಪನಿಯ ಇಬ್ಬರನ್ನು ಬಂಧಿಸಿದ್ದಾರೆ. ಈ ಬೆಳವಣಿಗೆ ನಡುವೆ ನಟಿಯರಿಬ್ಬರಿಗೂ ನೋಟಿಸ್ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ