
ಪ್ರಗತಿವಾಹಿನಿ ಸುದ್ದಿ: ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಆಗುವುದರ ದಾರಿಗೆ ಕೋಟಿ ಪ್ರಯತ್ನಗಳು ಅಡ್ಡಬಂದರೂ ಅವರು ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ
ಈ ಮಾತನ್ನು ಪುಣ್ಯ ಭೂಮಿಯಲ್ಲಿ ನಿಂತು ಹೇಳುತ್ತಿದ್ದೇನೆ. ರಾಜ್ಯದಲ್ಲಿ ಯಶಸ್ವಿ ನಾಯಕರಾಗಿ ಡಿಕೆಶಿ ಬೆಳೆದಿದ್ದು, ಅವರು ಧೀಮಂತ ನಾಯಕ. ಸಿಎಂ ಆಗುವುದು ಖಚಿತ ಎಂದು ಡಿಕೆಶಿ ಅವರ ಎದುರಲ್ಲೇ ಮೊಯ್ಲಿ ಅವರು ಭರ್ಜರಿ ಬ್ಯಾಟಿಂಗ್ ಮಾಡಿದರು.
ಯಾರು ಏನೇ ವೈಯಕ್ತಿಕವಾಗಿ ಟೀಕಿಸಿದರೂ ಯಾವುದನ್ನು ನೀವು ಕೇಳಬೇಡಿ. ನೀವು ಸಿಎಂ ಆಗುವುದು ಶತಃಸಿದ್ಧ ಡಿಕೆಶಿ ಅವರಿಗೆ ಎಂಎಲ್‌ಎ ಟಿಕೆಟ್ ಕೊಡಿಸಿದ್ದು ನಾನು. ಅಂದಿನಿಂದ ಈವರೆಗೂ ಸ್ವಂತ ಶ್ರಮದಿಂದ ದೊಡ್ಡ ಮಟ್ಟದ ಹಾಗೂ ಯಶಸ್ವಿ ನಾಯಕನಾಗಿ ಅವರು ಬೆಳೆದಿದ್ದಾರೆ ಎಂದು ಹೊಗಳಿದರು.
ಸಿಎಂ ಹುದ್ದೆ ಕೊಡುವುದಲ್ಲ, ಅದನ್ನು ಸಂಪಾದಿಸಬೇಕು. ಪಕ್ಷ ಸಂಕಷ್ಟದಲ್ಲಿದ್ದಾಗ ಸಂಚಲನ ಮೂಡಿಸಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಶ್ರಮಿಸಿದ ಧೀಮಂತ ನಾಯಕ. ಪಕ್ಷಕ್ಕೆ ಒಳ್ಳೆಯ ನಾಯಕತ್ವ ನೀಡಿ, ಸಂಘಟನೆ ಮಾಡಿದ್ದಾರೆ. ಟೀಕಿಸುವವರು ವೈಯಕ್ತಿಕ ತೃಪ್ತಿಗೆ ಟೀಕಿಸಬಹುದು. ಯಾವುದಕ್ಕೂ ನೀವು ಪ್ರತಿಕ್ರಿಯೆ ನೀಡಬೇಡಿ. ನೀವು ಸದ್ಯದಲ್ಲೇ ಸಿಎಂ ಆಗುವಿರಿ. ಅದು ತೀರ್ಮಾನವಾಗಿದೆ ಎಂದು ಮೋಯ್ಲಿ ಅವರು ಆಶಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ