
ಪ್ರಗತಿವಾಹಿನಿ ಸುದ್ದಿ: ರೌಡಿ ಶಿಟರ್ ಗಳಿಗೆ ಹೆಡ್ ಕಾನ್ಸ್ ಟೇಬಲ್ ಓರ್ವ ಮನೆ ದರೋಡೆಗೆ ಟ್ರೇನಿಂಗ್ ನೀಡುತ್ತಿದ್ದ ಆಘಾತಕಾರಿ ಸಂಗತಿ ಬಯಲಾಗಿದೆ.
ಚಿಕಬಳ್ಳಾಪುರದ ಗೌರಿ ಬಿದನೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ರಾಫಿಕ್ ಹೆಡ್ ಕಾನ್ಸ್ ಟೇಬಲ್ ತಮಗೆ ಮಎ ದರೋಡೆಗೆ ತರಬೇತಿ ನೀಡಿದ್ದಗಿ ಬಾಯ್ಬಿಟ್ಟಿದ್ದಾರೆ.
ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಶ್ರೀನಿವಾಸ್ ಮನೆಯಲ್ಲಿ 2 ಕೋಟಿ ಹಣ ಕೆಜಿಗಟ್ಟಲೇ ಚಿನ್ನ ಇರುವ ಬಗ್ಗೆ ಮಾಹಿತಿ ಕಲೆಹಾಕಿದ್ದರು ಫೆ.17ರಂದು ದರೋಡೆಗೆ ಪ್ಲಾನ್ ಮಾಡಿದ್ದರು. ಬಳಿಕ ಫೆ.20ರಂದು ಮನೆಗೆ ನುಗ್ಗಿದ ಕಳ್ಳರು ಮನೆಯವರನ್ನೆಲ್ಲ ಬೆದರಿಸಿ ಕಳ್ಳತನ ಮಾಡಿದ್ದಾರೆ. ಆದರೆ ಶ್ರೀನಿವಾಸ್ ಮನೆಯಲ್ಲಿ ಸಿಕ್ಕಿದ್ದು ಕೇವಲ ಒಂದು ಉಂಗುರ, 14 ಹರಳುಗಳು, ಎರಡು ಹರಳು ಕಲ್ಲು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ತಮಗೆ ದರೋಡೆಗೆ ತರಬೇತಿ ನೀಡುತ್ತಿದ್ದದ್ದು ಹೆಡ್ ಕಾನ್ಸ್ ಟೆಬಲ್ ಇಲಿಯಾಸ್ ಎಂದು ಬಾಯ್ಬಿಟ್ಟಿದ್ದಾರೆ. ಹೆಡ್ ಕಾನ್ಸ್ ಟೇಬಲ್ ವಿರುದ್ಧ ಪ್ರಕರಣ ದಾಖಲಿಸಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ