Politics

*ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ವಿರೋಧ*

ಪ್ರಗತಿವಾಹಿನಿ ಸುದ್ದಿ : ವಿಧಾನಸಭೆ ಜಂಟಿ ಅಧಿವೇಶನದ ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ವಿರೋಧಿಸಿರುವ ವಾಟಾಳ್ ನಾಗರಾಜ್ ಇನ್ನು ಮುಂದೆ ರಾಜ್ಯಪಾಲರು ಭಾಷಣವನ್ನು ಕನ್ನಡದಲ್ಲಿ ಮಾಡಲಿ ಎಂದು ಆಗ್ರಹಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿರುವ ಅವರು, ಕರ್ನಾಟಕ ರಾಜ್ಯದ ಮೇಲೆ ಹಿಂದಿ ಹೇರಿಕೆಯಾಗುತ್ತಿದ್ದು ಇಲ್ಲಿ ಹಿಂದಿ ಭಾಷಣದ ಅಗತ್ಯವಿಲ್ಲ ಎಂದ ವಾಟಾಳ್ ನಾಗರಾಜ್, ಇದು ಕರ್ನಾಟಕವೇ ಹೊರತು ಬೇರೆ ರಾಜ್ಯವಲ್ಲ. ಹೀಗಾಗಿ ಇಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ರು.

ರಾಮನಗರದ ಐಜೂರು ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಕರ್ನಾಟಕದ ಮೇಲೆ ಹಿಂದಿ ಹೇರಿಕೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಅದಲ್ಲದೆ ರಾಜ್ಯದ ಶಾಸಕರೆಲ್ಲರೂ ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಬೇಕಿತ್ತು. ಆದರೆ ಯಾವೊಬ್ಬ ಶಾಸಕನೂ ಈ ಕುರಿತು ಮಾತನಾಡಿಲ್ಲ ಎಂದು ಶಾಸಕರ ವಿರುದ್ಧವೂ ವಾಟಳ್ ಹರಿಹಾಯ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button