
ಪ್ರಗತಿವಾಹಿನಿ ಸುದ್ದಿ: ಯುವತಿಯೊಬ್ಬಳ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಯುವಕನೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹರಳೂರು ಕೂಡ್ಲು ರಸ್ತೆಯ ಎಸ್ ಎನ್ ಎನ್ ರಾಜ್ ಎಟರ್ನಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಮುಂಜಾನೆ 5 ಗಂಟೆ ವೇಳೆಗೆ ಯುವಕ ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಮಯಾಂಕ್ ರಜನೀ. ಉತ್ತರಪ್ರದೇಶ ಮೂಲದವನು ಎಂದು ಗುರುತಿಸಲಾಗಿದೆ.
ಯುವಕ ಕೆಳಗೆ ಬಿದ್ದಿರುವುದನ್ನು ಕಂಡ ಸೆಕ್ಯೂರಿಟಿ ಗಾರ್ಡ್, 12ನೇ ಮಹಡಿಯಲ್ಲಿದ್ದ ಆತನ ರೂಮ್ ಗೆ ಹೋಗಿ ಬಾಗಿಲು ಬಡಿದಿದ್ದಾರೆ. ಈ ವೇಳೆ ಯುವತಿ ಆಗತಾನೇ ಎದ್ದು ಬಂದು ಬಾಗಿಲು ತೆರೆದಿದ್ದಾಳೆ. ವಿಶಯ ತಿಳಿಸಿದಾಗ ಆಕೆಯೂ ಶಾಕ್ ಆಗಿದ್ದಾಳೆ. ಮಯಾಂಕ್ ರಜನಿ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿದ್ದ. ಕಳೆದ 2 ವರ್ಷಗಳಿಂದ ಯುವತಿ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದ. ಫ್ಲ್ಯಾಟ್ ಬಾಡಿಗೆ ಪಡೆದುಇ ಇಬ್ಬರು ವಾಸವಾಗಿದ್ದರು.
ಕೆಲ ಸಮಯದಿಂದ ಬೆಂಗಳೂರಿನಲ್ಲಿ ಯುವಕ ಸ್ಟಾರ್ಟಪ್ ಕಂಪನಿ ಶುರುಮಾಡಿದ್ದ. ಅದರಲ್ಲಿ ನಷ್ಟವಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ