Film & Entertainment

*ಚಿನ್ನ ಸ್ಮಗ್ಲಿಂಗ್ ಕೇಸ್: ರನ್ಯಾ ರಾವ್ ಗೆ ಒಂದೆ ದಿನ ಡಬಲ್ ಶಾಕ್*

ಪ್ರಗತಿವಾಹಿನಿ ಸುದ್ದಿ : ದುಬೈನಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ಈಗಾಗಲೇ ನಟಿ ರನ್ಯಾ ರಾವ್ ಬಂಧನವಾಗಿದ್ದು, ಒಂದೇ ದಿನ ಅವರಿಗೆ ಡಬಲ್ ಶಾಕ್ ಎದಿರಾಗಿದೆ. 

ಪ್ರಕರಣ ಸಂಬಂಧ ರನ್ಯಾ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದಲ್ಲದೆ ಪಾಸ್ ಪೋರ್ಟ್ ಕೂಡ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.‌

Home add -Advt

ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯಲ್ಲಿರುವ “ನಂದವಾಣಿ” ಮ್ಯಾನ್ಯನ್ 3ನೇ ಅಂತಸ್ತಿನಲ್ಲಿರೋ ಫ್ಲಾಟ್ ನಲ್ಲಿ ನಿನ್ನೆ ಇಬ್ಬರು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಮನೆಯಲ್ಲಿ ತಲಾಶ್ ಮಾಡಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ನಟಿ ರನ್ಯಾ ಪಾಸ್ ಪೋರ್ಟ್, ಸೇರಿ ಹಲವು ದಾಖಲೆಗಳನ್ನು ಡಿಆರ್ ಐ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ರನ್ಯಾಳ ಪಾನ್‌ಕಾರ್ಡ್, ಆಧಾ‌ರ್, ಪಾಸ್‌ ಪೋರ್ಟ್ ಗಳನ್ನ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ‌

ಅಕ್ರಮ ಚಿನ್ನ ಸಾಗಾಟ ಪ್ರಕರಣ ಸಂಬಂಧ ರನ್ಯಾ ರಾವ್ ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ನಿನ್ನೆಯಷ್ಟೇ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಆದೇಶಿಸಿತ್ತು.

Related Articles

Back to top button