Kannada NewsKarnataka NewsLatest

ರಾಮಮಂದಿರ ನೋಡುವ ಸೌಭಾಗ್ಯ ನಮ್ಮದು -ಉತ್ತರಾದಿ ಮಠದ ಶ್ರೀ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಶ್ರೀಮದ್ ಆಚಾರ್ಯರಿಗೆ ಮೂಲ ರಾಮದೇವರು ಒಲಿದಿದ್ದು ಕಾರ್ತೀಕ ಶುದ್ಧ ದ್ವಾದಶಿಯಂದೆ. ಇದೇ ದಿನ ಅಯೋಧ್ಯೆಯ ತೀರ್ಪು ಬಂದಿದ್ದು ಯೋಗಾ ಯೋಗವೇ ಸರಿ ಎಂದು ಉತ್ತರಾಧಿ ಮಠದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಮದೇವರ ಸಂಸ್ಕೃತಿ ನಮ್ಮ ರಾಜ್ಯದಲ್ಲಿ, ನಮ್ಮ ದೇಶದಲ್ಲಿ ಸ್ಥಾಪನೆಯಾಗುವಂತೆ ಆಗಬೇಕು ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ರಾಮಮಂದಿರಕ್ಕಾಗಿ ಹಿಂದೆ ಶ್ರಮಪಟ್ಟವರು ಸಾವಿರಾರು ಜನರಿದ್ದಾರೆ. ಸಾವಿರಾರು ಜನ ಹುತಾತ್ಮರಾಗಿದ್ದಾರೆ. ಶ್ರಮಪಟ್ಟಿರುವ ಇನ್ನೂ ಅನೇಕರು ನಮ್ಮೊಂದಿಗಿದ್ದಾರೆ. ಅವರೆಲ್ಲರನ್ನು ನಾವು ಸ್ಮರಿಸಬೇಕು. ಇಂತಹ ಮಹತ್ವದ ತೀರ್ಪು ಬಂದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಮದೇವರ ಮಂದಿರ ನೋಡುವ ಸೌಭಾಗ್ಯ ನಮಗೆ ಸಿಗುತ್ತಿರುವುದು ಪೂರ್ವಜನ್ಮದ ಸೌಭಾಗ್ಯ. ಆದರೆ ಇದೇ ವೇಳೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ವಿನಯದಿಂದ ನಡೆದುಕೊಳ್ಳಬೇಕು. ತಂದೆ-ತಾಯಿಯೊಂದಿಗೆ, ಗುರು ಹಿರಿಯರೊಂದಿಗೆ, ಸಮಾಜದಲ್ಲಿ ವಿನಯದಿಂದ ವರ್ತನೆ ಮಾಡಬೇಕೆನ್ನುವ ಸಂದೇಶವನ್ನು ನೀಡಿದವನು ಶ್ರೀರಾಮ. ಅದರಂತೆ ನಾವೆಲ್ಲೆ ನಡೆದುಕೊಳ್ಳಬೇಕಾಗಿದೆ ಎಂದು ಉತ್ತರಾದಿ ಶ್ರೀಗಳು ಆಶಿಸಿದರು.

Home add -Advt

 

Related Articles

Back to top button