
ಪ್ರಗತಿವಾಹಿನಿ ಸುದ್ದಿ: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಡುಪಿಯ ಗರುಡ ಗ್ಯಾಂಗ್ನ ಇಸಾಕ್ ಎಂಬುವವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಶೂಟೌಟ್ ವೇಳೆ ಇಬ್ಬರು ಪಿಎಸ್ಐಗಳಿಗೆ ಗಾಯಗಳಾಗಿದ್ದು, ಆರೋಪಿ ಇಸಾಕ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಮಣಿಪಾಲ್ ಪೊಲೀಸರ ಕೈಯಿಂದ ಇಸಾಕ್ ತಪ್ಪಿಸಿಕೊಂಡಿದ್ದ.
ಬೆನ್ನತ್ತಿ ಕಾರ್ಯಾಚರಣೆ ನಡೆಸಿರುವ ಮಣಿಪಾಲ್ ಪೊಲೀಸರು, ಇಸಾಕ್ ಇರುವ ಖಚಿತ ಮಾಹಿತಿ ಮೇರೆಗೆ ಹಿರಿಯಡ್ಕಕ್ಕೆ ತೆರಳಿ, ಆರೋಪಿಯನ್ನು ಹಿಡಿಯಲು ಮುಂದಾದಾಗ ಹಲ್ಲೆಗೆ ಮುಂದಾಗಿ ಎಸ್ಕೆಪ್ ಆಗಲು ಪ್ರಯತ್ನಿಸಿದ್ದಾನೆ. ಆತ್ಮರಕ್ಷಣೆಗೆ ಖಾಕಿ ಟೀಂ ಇಸಾಕ್ ಕಾಲಿಗೆ ಗುಂಡು ಹಾರಿಸಿದೆ.