
ಪ್ರಗತಿವಾಹಿನಿ ಸುದ್ದಿ: ನೀರು ಹಿಡಿಯಲೆಂದು ಹೋಗಿದ್ದ ಮಹಿಳೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆ ಆನಂದಪುರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.
ಮೋಟಾರ್ ಗೆ ತಗುಲಿದ್ದ ವೈರ್ ತಗುಲಿ ಕರೆಂತ್ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಆನಂದಪುರ ಮಾರ್ಕೆಟ್ ರಸ್ತೆಯಲ್ಲಿ ಸಾಲು ಸಾಲಾಗಿ ಮೋಟಾರ್ ಪಂಪ್ ಅಳವಡಿಸಲಾಗಿದ್ದು, ಬಿಬಿಎಂಪಿ ಬೇಜವಾಬ್ದಾರಿ ತನಕ್ಕೆ ಆಸ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆಯನ್ನು 24 ವರ್ಷದ ಸೆಲ್ವಿ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಮನೆಗೆ ನೀರು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.