
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ತನ್ನ ಸಾಲ ತೀರಿಸಲು ಸ್ನೇಹಿತೆಯನ್ನೇ ಕೊಂದು ಆಕೆಯ ಸರಕದ್ದು ಗಿರವಿ ಇಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಸುಲೋಚನಾ (62) ಕೊಲೆಯಾದ ಮಹಿಳೆ. ಶಕುಂತಲಾ (42) ಸ್ನೇಹಿತೆಯನ್ನೇ ಕೊಂದ ಆರೋಪಿ. ಇಬ್ಬರೂ ಕೆ.ಸಿ ಬಡಾವಣೆಯ ನಿವಾಸಿಗಳಾಗಿದ್ದು, ಪರಪಸ್ಪರ ಸ್ನೇಹಿತೆಯರಾಗಿದ್ದರು.
ಆದರೆ ಶಕುಂತಲಾ ಸಾಲ ಮಾಡಿಕೊಂಡಿದ್ದಳು. ಸುಲೋಚನಾ ಕತ್ತಿನಲ್ಲಿದ್ದ ಬಂಗಾರದ ಸರದ ಮೇಲೆ ಕಣ್ಣಿಟ್ಟಿದ್ದ ಶಕುಂತಲಾ ಮಾ.5ರಂದು ಮನೆಗೆ ಕರೆಸಿ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಬಳಿಕ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಬಳಿಕ ಸುಲೋಚನಾ ಪ್ರಜ್ಞೆ ತಪ್ಪಿ ಬಿಬ್ಬಿದ್ದಾಳೆ ಎಂದು ಅಕ್ಕಪಕ್ಕದ ಮನೆಯವರಿಗೆ ಕೂಗಿ ಹೇಳಿದ್ದಾಳೆ.
ಹೀಗೆ ಕದ್ದ ಸರವನ್ನು 1.5 ಲಕ್ಷಕ್ಕೆ ಗಿರವಿ ಇಟ್ಟಿದ್ದಾಳೆ. ಸುಲೋಚನ ಅಸಾವಿನ ಬಗ್ಗೆ ಅನುಮಾನಗೊಂಡ ನಜರಾಬಾದ್ ಪೊಲೀಸರು ಶಕುಂತಳಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹತ್ಯೆ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಸದ್ಯ ಪೊಲೀಸರು ಆರೋಪಿ ಶಕುಂತಲಾಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.