Latest

ಕರ್ನಾಟಕದಲ್ಲಿ ಲೋಕಸಭೆ ಕಣಕ್ಕೆ ರಾಷ್ಟ್ರೀಯ ಸಮಾಜ ಪಕ್ಷ

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಷ್ಟ್ರೀಯ ಸಮಾಜ ಪಕ್ಷ ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದು ಪಕ್ಷದ ಸಂಸ್ಥಾಪಕ, ಮಹಾರಾಷ್ಟ್ರದ ಪಶು ಸಂಗೋಪನಾ ಸಚಿವ ಮಹಾದೇವ ಜಾನಕರ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಕಿಡಿಕಾರಿದರು. ನಮ್ಮದು ರಾಷ್ಟ್ರೀಯ ಪಕ್ಷ. ಕರ್ನಾಟಕ ಮಹಾರಾಷ್ಟ್ರ ಎರಡೂ ಒಂದೆ. ಗಡಿ ವಿವಾದದಲ್ಲಿ ನಾವು ತಲೆ ಹಾಕುವುದಿಲ್ಲ. ಅಭಿವೃದ್ಧಿ ಒಂದೆ ನಮ್ಮ ಉದ್ದೇಶ  ಎಂದೂ ಅವರು ಹೇಳಿದರು.
ನಮ್ಮ ಪಕ್ಷ ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಈ ಬಾರಿ ಮೋದಿಯೆ ಮತ್ತೆ ಪ್ರಧಾನಿ ಆಗಲಿದ್ದಾರೆ.  ಘಟ ಬಂಧನ್ ವಿಫಲವಾಗಲಿದೆ ಎಂದು ಜಾನಕರ ಹೇಳಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button