ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ್ ಕವಟಿಗಿಮಠ ಇಂದು ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಮಾಂಜರಿ ಮಾಂಜರಿವಾಡಿ, ಯಡೂರ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ರಾಜ್ಯ ಸರಕಾರದ ನೀರಾವರಿ ಇಲಾಖೆಯಿಂದ ಸುಮಾರು ೮ ಕೊಟಿ ರು ಮಂಜೂರಾತಿ ಪಡೆದ ಅನುದಾನದಲ್ಲಿ ಈ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದೆಂದು ಅವರು ಹೇಳಿದರು.
ಚಿಕ್ಕೋಡಿ, ರಾಯಬಾಗ, ಅಥಣಿ ತಾಲ್ಲೂಕಿನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರಕಾರ ಪಣತೊಟ್ಟಿದೆ. ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜನರ ಅನುಕೂಲಕ್ಕಾಗಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ತಲಾ ಐದು ಲಕ್ಷ ರೂಪಾಯಿ ಹಾಗೂ ಬೆಳೆಗಳಿಗೆ ಹೆಚ್ಚಿನ ಅನುದಾನ ನೀಡುವ ನೀಡಲು ಆದೇಶಿಸಿದ್ದಾರೆ. ಅದಕ್ಕಾಗಿ ಪ್ರವಾಹ ಪೀಡಿತರ ಯಾವುದೇ ಆತಂಕದಲ್ಲಿ ಒಳಪಡಬಾರದು ಎಂದು ಅವರು ಹೇಳಿದರು.
ಈ ವೇಳೆ ಮಾಂಜರಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಬಬನರಾವ್ ಬೆಳವಡಿ, ಮಹೇಶ್ ದಾಭೋಳೆ, ಯೋಗೇಶ್ ಕದಮ್, ಮಾ೦ಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾ ಸಾಹೇಬ ಯಾದವ, ಸುನೀಲ್ ಖೋತ್, ಶಿವಾನಂದ ಪಾಟೀಲ್, ಲಕ್ಷ್ಮಿ ಸೌಹಾರ್ದ ಸಂಸ್ಥೆಯ ನಿರ್ದೇಶಕರಾದ ಅಣ್ಣಪ್ಪ ಮಿರ್ಜಿ, ನಿಜನಗೌಡ ಪಾಟೀಲ, ಕಾಕಾಸಾಹೇಬ ಲೋಕುರೆ, ಮೋಹನ್ ಲೋಕರೆ, ಅಣ್ಣಾ ಸಾಹೇಬ್ ಸಂಕೇಶ್ವರಿ, ಅಶೋಕ ಕಾಳವಿರೆ ತಾನಾಜಿ ಲಗಳೇ, ಚಂದ್ರಕಾಂತ್ ಮಿರ್ಜಿ, ನೂರುದ್ದೀನ್ ತಾಂಬೋಳಿ, ದತ್ತಾ ಬಾನೆ, ನಂದಕುಮಾರ್ ರಸಾಳೆ, ಪರಶುರಾಮ ಪವಾರ್, ದಶರಥ್ ಯಾದವ್, ಅಪ್ಪಾಸಾಹೇಬ್ ಶೇಡಬಾಳೆ, ಪೊಪಟ ಜಾಧವ್, ತಾನಾಜಿ ಜಾದವ್, ಎಸ್ ಕೆ ಹೊತ್, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಜಿತರಾವ ದೇಸಾಯಿ, ನರ್ಸ್ ಗೌಡ ಪಾಟೀಲ್, ನವನಾಥ ಚವಾಣ, ರಂಜಿತ್ ದೇಸಾಯಿ, ರಾಹುಲ್ ದೇಸಾಯಿ ಹಾಗೂ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ